ಅಭಿಪ್ರಾಯ / ಸಲಹೆಗಳು

ಕಾರ್ಯನಿರ್ವಾಹಕ ನಿರ್ದೇಶಕರ ಸಂದೇಶ

ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಸುಸ್ವಾಗತ!

ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಮತ್ತು ಮಾಹಿತಿಯು ಬಳಕೆದಾರ ಸ್ನೇಹಿ ಮತ್ತು ಪರಿಷ್ಕೃತಗೊಂಡಿದೆ. ಅಲ್ಲದೇ ಮಾಹಿತಿಯನ್ನು ಸರ್ಫಿಂಗ್ ಮಾಡುವುದು ಸುಲಭವಾಗಿದೆ.

ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು ತನ್ನ 16 ನೇ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ನವೀಕರಿಸಬಹುದಾದ ಇಂಧನ, ಶಕ್ತಿ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಪರಿಸರ ರಕ್ಷಣೆ, ಅರಣ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಇತರೆ ಸಂಬಂಧಪಟ್ಟ ವಿಷಯಗಳನ್ನು ಭೋಧನೆ ಮಾಡುವ ನಿಟ್ಟಿನಲ್ಲಿ ದೇಶದಲ್ಲೇ ಶ್ರೇಷ್ಠ ಸಂಪನ್ಮೂಲ ಕೇಂದ್ರವಾಗುವ ಅಂತಿಮ ಉದ್ದೇಶವನ್ನು ಹೊಂದಿದೆ.

ಹಿಂದೆ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿನ ಪರಿಸರದ ಸಮಗ್ರ ಅಭಿವೃದ್ಧಿಯ ಬಗ್ಗೆ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕ್ಯಾಲೆಂಡರ್ ಗೆ ಸೀಮಿತವಾಗಿತ್ತು. ಹಿಂದಿನ ಉದ್ದೇಶಿತ ಅರಿವು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದನ್ನು ಮೀರಿ ಹೊಸ ಉಪಕ್ರಮಗಳನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ಹೊಸ ಉಪಕ್ರಮಗಳಾದ ಅರಿವು ಮೂಡಿಸುವುದು ಮತ್ತು ಯೋಜನೆಗಳ ಅನುಷ್ಠಾನ ಈ ಎರಡು ಉದ್ದೇಶದಿಂದ ಸಂಸ್ಥೆಯು ಮುನ್ನುಗ್ಗುತ್ತಿದೆ. ಇವುಗಳಲ್ಲಿ ಕೆಲವು ಕುಗ್ರಾಮಗಳ ವಿದ್ಯುದೀಕರಣ ಕಾರ್ಯಕ್ರಮಗಳು, ಸಂಸ್ಥೆಗಳ ವಾಕ್ ತ್ರೂ ಎನಜಿ ಅಸೆಸ್ಮೆಂಟ್, ಗ್ರಾಮೀಣ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಒಲೆಗಳ ನಿಮಾ೵ಣ ಮಾಡುವುದು ಇತರೆ. ಜೊತೆಗೆ ಪಟ್ಟಣಗಳಲ್ಲಿ ಸೋಲಾರ್ ಮೇಲ್ಚಾವಣಿ ವ್ಯವಸ್ಥೆಯ ಬಗ್ಗೆ, ಘನ ತ್ಯಾಜ್ಯ ನಿರ್ವಹಣೆ, ಅಡುಗೆ ತ್ಯಾಜ್ಯ ಆಧಾರಿತ ಬಯೋಗ್ಯಾಸ್ ಮತ್ತು ಮನೆ ಗೊಬ್ಬರ ನಿರ್ಮಾಣದ ಬಗ್ಗೆ ಒಂದು ದಿನದ ಕಾರ್ಯಗಾರಗಳನ್ನು ಏರ್ಪಡಿಸುವುದು. ಇದರಿಂದ ಜನರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಜಾಲತಾಣವು ಸಂಸ್ಥೆಯ ಮಾಹಿತಿ ಹಾಗೂ ಅದರ ರಚನೆ, ಸಂಸ್ಥೆಯ ಆವರಣದಲ್ಲಿನ ಸೌಲಭ್ಯಗಳು, ಇಂಧನ ಉದ್ಯಾನ, ಕಾರ್ಯಕ್ರಮಗಳು ಮತ್ತು ಉಪಕ್ರಮಗಳು, ತಾಂತ್ರಿಕತೆ ಮತ್ತು ಪ್ರಸ್ತುತತೆ, ಸಂಸ್ಥೆಯ ಸಾಧನೆ ಛಾಯಾ ಚಿತ್ರಗಳ ಗ್ಯಾಲರಿ, ಸಲಹಾ ಕಾಯ೵ಕ್ರಮ ಇತ್ಯಾದಿಗಳನ್ನು ಒಳಗೊಂಡಿದೆ. ಅಲ್ಲದೇ, ನೀವು ಉಚಿತವಾಗಿ ಆಗಾಗ್ಗೆ ನವೀಕರಿಸಲಾದ ಸಂಸ್ಥೆಯ ವರ್ತಮಾನ ಪತ್ರಿಕೆ ಮತ್ತು ಲೇಖನಗಳನ್ನು ಸಹ ನೋಡಬಹುದು. ನಾನು ಈ ಮೂಲಕ ತಿಳಿಸುವುದೇನೆಂದರೆ ತಾವೆಲ್ಲಾ ಸಂಸ್ಥೆಗೆ ಬೇಟಿ ನೀಡಿ ನಮ್ಮ ಪರಿಣಿತರರೊಂದಿಗೆ ಪರಸ್ಪರ ಚರ್ಚಿಸಿ ಸಂಬಂಧಿಸಿದ ಅಧಿಕೃತ ಮಾಹಿತಿ ಮತ್ತು ಸಲಹೆಯನ್ನು ಪಡೆಯುವ ಅವಕಾಶವನ್ನು ಬಳಸಿಕೊಳ್ಳಲು ಈ ಮೂಲಕ ಸ್ವಾಗತವನ್ನು ಬಯಸುತ್ತೇನೆ.

ಮನೋಜ್ ಕುಮಾರ್ ಶುಕ್ಲ , ಭಾ.ಅ.ಸೇ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು

ಇತ್ತೀಚಿನ ನವೀಕರಣ​ : 27-12-2019 05:13 PM ಅನುಮೋದಕರು: Mahantesh Kumbar Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080