ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲ ಉದೇಶಗಳು ಕಾರ್ಯಾಚರಣೆ

"ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ ಮತ್ತು ಪ್ರೋತ್ಸಾಹಿಸುವುದರ ಜೊತೆಗೆ ನಾಗರೀಕರಿಗೆ ಅಗತ್ಯ ಮಾಹಿತಿ ಹಾಗೂ ಸೇವೆಗಳನ್ನು ದಕ್ಷತೆಯೊಂದಿಗೆ ನಿರಂತರವಾಗಿ ಆನ್ಲೈನ್ ಮೂಲಕ ಪೂರೈಕೆ” ಎಂಬ ಆಶಯವನ್ನು ಅನುಷ್ಠಾನಗೊಳಿಸುವುದು". 

 

ನಾಗರೀಕಸಬಲೀಕರಣ

ಸರ್ಕಾರದ ಪ್ರಕ್ರಿಯೆ, ನಿರ್ವಹಣೆ ಹಾಗೂ ಚಟುವಟಿಕೆಗಳ ಮಾಹಿತಿ ನಾಗರೀಕರಿಗೆ ತಕ್ಷಣದಲ್ಲಿ, ಸುಲಭವಾಗಿ ಲಭ್ಯವಾದರೆ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಬದ್ಧತೆ ಒಡಮೂಡಿ ನಾಗರೀಕ ಸಬಲೀಕರಣ ಸಾಧ್ಯವಾಗುತ್ತದೆ.

 

ಸೇವಾ ವಿತರಣೆ

ಸರ್ಕಾರ ನೀಡುವ ನಾಗರೀಕ ಸೇವೆಗಳನ್ನು ಸುಲಭವಾಗಿ ಮತ್ತು ಸಮವಾಗಿ ಪೂರೈಕೆ ಮಾಡುವುಕ್ಕೆ ಗುಣಮಟ್ಟ ಮತ್ತು ಸುರಕ್ಷತೆ ಯುಳ್ಳ ಸೇವಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು.

 

ಆರ್ಥಿಕ ಅಭಿವೃದ್ಧಿ

ನಾಗರೀಕ ಸೇವೆಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಿದಾಗ ನಾಗರೀಕರ ಜೀವನ ಮಟ್ಟ ಎಲ್ಲ ಆಯಾಮಗಳಿಂದ ಸುಧಾರಣೆಗೆ ಯಾಗುತ್ತದೆ. ಆಮೂಲಕ ಉದ್ಯಮಗಳಿಗೆ ರಾಜ್ಯವು ಪ್ರೀತಿಯ ನೆಲೆಯಾಗಿ ಆರ್ಥಿಕ ಅಭಿವೃದ್ಧಿಯಾಗುತ್ತದೆ.

 

ಜಾಲತಾಣಗಳ ಸಕ್ರಿಯತೆ

ಸರ್ಕಾರದ ವಿವಿಧ ಇಲಾಖೆಗಳು ಮಾಹಿತಿಗಳು ಮತ್ತು ಸೇವೆಗಳನ್ನು ಕಾಲಕಾಲಕ್ಕೆ ಸುಲಭವಾಗಿ ಸಾರ್ವಜನಿಕರಿಗೆ ವಿತರಿಸಲು ಜಾಲತಾಣಗಳು ಸಮರ್ಪಕ ಮಾಧ್ಯಮವಾಗಿವೆ. ಎಲ್ಲ ಇಲಾಖೆಗಳಿಗೂ ಏಕರೂಪದ ಜಾಲತಾಣವನ್ನು ಹೊಂದುವುದು.

 

ಪ್ರತಿ ಸ್ಪಂದನ

ಇಲಾಖೆಗಳು ತಮ್ಮ ಜಾಲತಾಣಗಳ ಮೂಲಕ ಮಾಹಿತಿ ಮತ್ತು ಸೇವೆಗಳನ್ನು ನಾಗರೀಕರಿಗೆ ಒದಗಿಸುವುದರಿಂದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವೇಗ ಪಡೆದುಕೊಳ್ಳುತ್ತದೆ. ನಾಗರೀಕರು ಅದೇ ರೀತಿಯಲ್ಲಿ ಪ್ರತಿಸ್ಪಂದಿಸುವುದರಿಂದ ಮಾದರಿ ಆಡಳಿತ ಸ್ಥಾಪನೆಯಾಗುತ್ತದೆ.

 

ಸುರಕ್ಷಿತ ವಹಿವಾಟು

ಇಲಾಖೆಗಳು ತಮ್ಮ ಜಾಲತಾಣಗಳಿಗೆ ಸ್ವ-ಸಹಾಯ ಅನ್ವಯಿಕೆ(ಅಪ್ಲಿಕೇಷನ್)ಗಳನ್ನು ಅಳವಡಿಸಿರುವುದರಿಂದ ನಾಗರೀಕರು ತಮ್ಮ ವಹಿವಾಟುಗಳನ್ನು /ಪ್ರಕ್ರಿಯೆಗಳನ್ನು ಆನ್ ಲೈನ್ ಮೂಲಕ ಮಾಡಬಹುದು. ಬಳಕೆದಾರರು ಯಾವುದೇ ಸ್ಥಳದಿಂದಲೂ, ಹೇಗಾದರೂ, ಯಾವ ಸಮಯದಲ್ಲಿಯಾದರೂ  ಜಾಲದ ಅನುಕೂಲ ಪಡೆಯಬಹಾದಾಗಿದೆ.

 

ಪರಿವರ್ತನೆ

ಸರ್ಕಾರಿ ಸೇವೆಗಳ ವಿತರಣೆ ಹಾಗೂ ಸರ್ಕಾರದ ಕಾರ್ಯ ವೈಖರಿಯ ವ್ಯಾಖ್ಯಾನವೇ ಬದಲಾಗಿದೆ. ಮಾಹಿತಿ, ಸೇವಾ ವಿತರಣೆ ಮತ್ತು ಸರ್ಕಾರಿ ಪ್ರಕ್ರಿಯೆಗಳನ್ನು ಸಾಂಪ್ರದಾಯಿಕ ಆಯಕಟ್ಟು ಮೀರಿ ಸಮಗ್ರಗೊಳಿಸಲಾಗುತ್ತಿದೆ.

ಇತ್ತೀಚಿನ ನವೀಕರಣ​ : 31-08-2021 03:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080