ಅಭಿಪ್ರಾಯ / ಸಲಹೆಗಳು

ಸೂರ್ಯಮಿತ್ರ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಸೂರ್ಯಮಿತ್ರ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ನವ್ಯ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಜವಹರ್ ಲಾಲ್ ನೆಹರೂ ರಾಷ್ಟ್ರೀಯ ಸೌರ ಮಿಷನ್ (ಜೆ.ಎನ್.ಎನ್.ಎಸ್.ಎಮ್) ಅಡಿಯಲ್ಲ್ 5 ರಷ್ಟು ಸಾಮರ್ಥ್ಯದ ಗುರಿಯನ್ನು ಹೆಚ್ಚಿಸಿದ್ದು, ಪ್ರಸ್ತುತವಾಗಿ ಭಾರತವು 2022ರೊಳಗೆ 1,00,000 ಮೆಗಾವ್ಯಾಟ್ ಸೌರಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸದರಿ ಗುರಿಯು ಪ್ರಮುಖವಾಗಿ 40 ಜಿ.ವಾ ಮೇಲ್ಛಾವಣಿ ಮತ್ತು 60 ಜಿ.ವಾ ದೊಡ್ಡ ಮತ್ತು ಮಧ್ಯಮ ಸ್ಕೇಲ್ ಗ್ರಿಡ್ ಸೌರಶಕ್ತಿ ಯೋಜನೆಗಳನ್ನು ಒಳಗೊಂಡಿರುತ್ತದೆ. ಈ ಮಹಾತ್ವಕಾಂಕ್ಷೆಯ ಗುರಿಯೊಂದಿಗೆ, ಭಾರತ ದೇಶವು ವಿಶ್ವದ ಎಲ್ಲಾ ಅಭಿವೃದ್ಧಿ ಹೊಂದಿದ ದೇಶಗಳನ್ನುಮೀರಿಸಿ, ವಿಶ್ವದಲ್ಲೆ ಅತಿದೊಡ್ಡ ಹಸಿರು ಶಕ್ತಿ ಉತ್ಪಾದಕ ದೇಶವಾಗಲಿದೆ.

ಮೇಲಿನ ಗುರಿಯನ್ನು ಸಾಧಿಸುವ ಸಲುವಾಗಿ, ನವ್ಯ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 5 ವರ್ಷಗಳಲ್ಲಿ (2015-16 ರಿಂದ 2019-20) 50,000 ತರಬೇತಿ ಪಡೆದವರನ್ನು ಸೃಷ್ಟಿಸಲು ಸೂರ್ಯಮಿತ್ರ ಕೌಶಲ್ಯಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ರಾಷ್ಟ್ರೀಯ ತರಬೇತಿ ಮಂಡಳಿಯು ತರಬೇತಿಯ ಪಠ್ಯ ವಿಷಯವನ್ನು ರಾಷ್ಟೀಯ ಕೌಶಲ್ಯ ಅರ್ಹತೆ ಚೌಕಟ್ಟಿನ ಪ್ರಕಾರ ಅಂಗೀಕರಿಸಿದೆ.

ಸದರಿ ಯೋಜನೆಯನ್ನು ನ್ಯಾಷನಲ್ ಇನ್ಸ್ಟಿಟ್ಯುಟ್ ಆಫ್ ಸೋಲಾರ್ ಎನರ್ಜಿ (ಎನ್.ಐ.ಎಸ್.ಇ)ಯು ಪ್ರಾಯೋಜಿತ ಮತ್ತು ಜಾರಿಗೊಳಿಸುತ್ತಿದೆ.

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯ ಸೂರ್ಯಮಿತ್ರ ತರಬೇತಿ ನೀಡಲು ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಗುರುತಿಸಿರುತ್ತದೆ. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯು ಡಿಸೆಂಬರ್ 2015ರಲ್ಲಿ ಮೊದಲ ಸೂರ್ಯಮಿತ್ರ ತಂಡವನ್ನು ಪ್ರಾರಂಭಿಸಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಸೂರ್ಯಮಿತ್ರ ತರಬೇತಿಯನ್ನು ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ.

ಕಾರ್ಯಕ್ರಮದ ಉದ್ದೇಶ: ನವೀಕರಿಸಬಹುದಾದ ಇಂಧನ ಸಾಧನಗಳ ಅನುಸ್ಥಾಪನ, ಸಂವಹನ, ಕಾರ್ಯಾಚರಣೆ, ಮಾರಾಟ ಮತ್ತು ಸೇವೆಯ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು. ತರಬೇತಿ ಪಡೆದ ಸೂರ್ಯಮಿತ್ರರಿಗೆ ಸೌರಶಕ್ತಿ ಕ್ಷೇತ್ರದ ಅನುಸ್ಥಾಪನ, ಸಂವಹನ, ಕಾರ್ಯಾಚರಣೆ ಮತ್ತು ನಿರ್ವಹಣೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿರುತ್ತದೆ. ಅಭ್ಯರ್ಥಿಗಳು ಸೌರಶಕ್ತಿ ವಲಯದಲ್ಲಿ ಉದ್ಯಮಶೀಲತೆಯನ್ನು ಪಡೆಯಲು ಸೂರ್ಯಮಿತ್ರ ತರಬೇತಿಯನ್ನು ವಿನ್ಯಾಸಗೊಳಿಸಲಾಗಿರುತ್ತದೆ.

ತರಬೇತಿ ಅವಧಿ     :     3 ತಿಂಗಳು

ತಂಡದ ಮಿತಿ       :     30 ಅಭ್ಯರ್ಥಿಗಳು

ವಿದ್ಯಾರ್ಹತೆ         :     10ನೇ ತರಗತಿ + .ಟಿ./ ಡಿಪ್ಲೊಮಾ (ಎಲೆಕ್ಟ್ರಿಕಲ್ /ಮೆಕ್ಯಾನಿಕಲ್ / ಎಲೆಕ್ಟ್ರಾನಿಕ್ಸ್ / ಸಿವಿಲ್ / ಫಿಟ್ಟರ್ / ಇನ್ಸ್ಟ್ರುಮೆಂಟೇಶನ್ / ವೆಲ್ಡರ್)

ಆದ್ಯತೆ              :      ಮಹಿಳೆ / ಮೀಸಲಾತಿ ವಿಭಾಗ ಮತ್ತು ಗ್ರಾಮೀಣ ಪ್ರದೇಶಗಳು

ಉನ್ನತ ಮಟ್ಟದ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳು ತರಬೇತಿಗೆ ಅರ್ಹರಿರುವುದಿಲ್ಲ.

ಊಟ ಮತ್ತು ವಸತಿಯನ್ನೊಳಗೊಂಡ ತರಬೇತಿಯು ಉಚಿತವಾಗಿ ನೀಡಲಾಗುತ್ತದೆ.

ಇತ್ತೀಚಿನ ನವೀಕರಣ​ : 16-07-2021 12:59 PM ಅನುಮೋದಕರು: Mahantesh Kumbar Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080