ಅಭಿಪ್ರಾಯ / ಸಲಹೆಗಳು

“ವರುಣ ಮಿತ್ರ” ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

“ವರುಣ ಮಿತ್ರ” ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ

ಕಾರ್ಯಕ್ರಮದ ಬಗ್ಗೆ : ಭಾರತ ಮತ್ತು ವಿದೇಶಗಳಲ್ಲಿ ಬೆಳೆಯುತ್ತಿರುವ ಸೌರ ನೀರು ಪಂಪಿಂಗ್ಯೋಜನೆಯ ಸ್ಥಾಪನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಉದ್ಯೋಗದ ಅವಕಾಶಗಳನ್ನು ಪರಿಗಣಿಸಿ ಯುವಕರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ವಿ.ಎಸ್.‌ಡಿ.ಪಿ. ಹೊಂದಿದೆ. ಸೌರ ನೀರು ಪಂಪಿಂಗ್ಕ್ಷೇತ್ರದಲ್ಲಿ ಹೊಸ ಉದ್ಯಮಿಗಳಾಗಲು ಅಭ್ಯರ್ಥಿಗಳನ್ನು ತಯಾರಿಸಲು ವಿ.ಎಸ್.‌ಡಿ.ಪಿ. ವಿನ್ಯಾಸಗೊಳಿಸಲಾಗಿದೆ. ಇದು 3 ವಾರಗಳು / 21 ದಿನಗಳು / 120 ಗಂಟೆಗಳ ವಸತಿ ಕೌಶಲ್ಯಾಭಿವೃದ್ಧಿಯಾಗಿದ್ದು, ಸ್ಕಿಲ್ಕೌನ್ಸಿಲ್ಗ್ರೀನ್ಜಾಬ್ಸ್‌ [SCG/Q0112 (SGJ/N0134)] ಅರ್ಹತಾ ಪ್ಯಾಕ್ಅನ್ನು ಅನುಸರಿಸುವ ಕಾರ್ಯಕ್ರಮ.

ಕೆಳಗಿನ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ, ಆದಾಗ್ಯೂ ಕೆಳಗೆ ಸೂಚಿಸಿದಂತೆ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ:

ವಿದ್ಯಾರ್ಹತೆ : ಅಭ್ಯರ್ಥಿಯು ಡಿಪ್ಲೊಮಾ (ಎಲೆಕ್ಟ್ರಿಕಲ್‌ / ಎಲೆಕ್ಟ್ರಾನಿಕ್ಸ್ / ಸಿವಿಲ್ / ಮೆಕ್ಯಾನಿಕಲ್)ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಅಂತಿಮ ವರ್ಷದ ಇಂಜಿನಿಯರಿಂಗ್‌ (ಎಲೆಕ್ಟ್ರಿಕಲ್‌ / ಎಲೆಕ್ಟ್ರಾನಿಕ್ಸ್‌ / ಸಿವಿಲ್‌ / ಮೆಕ್ಯಾನಿಕಲ್)‌ ವಿದ್ಯಾರ್ಥಿಗಳಾಗಿರಬೇಕು. ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಗ್ರಾಮೀಣ ಹಿನ್ನೆಲೆಯಿಂದ ಬರುವ ಅಭ್ಯರ್ಥಿಗಳು, ನಿರುದ್ಯೋಗಿ ಯುವಕರು, ಮಹಿಳೆಯರು, ಎಸ್.ಸಿ / ಎಸ್.ಟಿ ಅಭ್ಯರ್ಥಿಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗುವುದು. ಆಯ್ಕೆಯ ಅರ್ಹತೆಯನ್ನು ಆಧರಿಸಿರುತ್ತದೆ.

ವಯೋಮಿತಿ : 20 ವರ್ಷದಿಂದ 40 ವರ್ಷ

 

ಕಾರ್ಯಕ್ರಮದ ಅಂತ್ಯದಲ್ಲಿ, ಸರಿಯಾದ ಮೌಲ್ಯಮಾಪನ ಮಾಡಲಾಗುವುದು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು.

ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

ಎಲ್ಲಾ ಸಂಬಂಧಿತ ಪ್ರಮಾಣಪತ್ರಗಳ ಜೆರಾಕ್ಸ್ಪ್ರತಿಗಳ ಮೇಲೆ ಸ್ವಯಂ ದೃಢೀಕರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ರವಾನಿಸಬೇಕು.

ತಂಡದ ಸಾಮರ್ಥ್ಯ 30 ಅಭ್ಯರ್ಥಿಗಳು

(ದಯವಿಟ್ಟು ಲಕೋಟೆಯ ಮೇಲೆವರುಣ ಮಿತ್ರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಎಂದು ನಮೂದಿಸಿ)

 

 

 

 

 

 

 

 

 

 

ವಿಳಾಸ:

ಸಂಯೋಜಕರು,

ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ,

ಶ್ರೀರಾಮಪುರ ಕ್ರಾಸ್‌, ಜಕ್ಕೂರು,

ಬೆಂಗಳೂರು – 560 064.

ದೂರವಾಣಿ ಸಂಖ್ಯೆ : 080 - 23626359

 

ಅಧಿಸೂಚನೆ ಮತ್ತು ಅರ್ಜಿ ನಮೂನೆಗಾಗಿ ಸಂಸ್ಥೆಯ ವೆಬ್ಸೈಟ್‌ : www.mgired.karnataka.gov.in ಗೆ ಭೇಟಿ ನೀಡಿ ಡೌನ್ಲೋಡ್ಮಾಡಿಕೊಳ್ಳಿ

ಭರ್ತಿ ಮಾಡಿದ ಅರ್ಜಿಗಳನ್ನು ಸಂಸ್ಥೆಯ -ಮೇಲ್‌ : mgiredsuryamitra@gmail.com ಗೆ ರವಾನಿಸಬಹುದು

ಇತ್ತೀಚಿನ ನವೀಕರಣ​ : 16-07-2021 12:59 PM ಅನುಮೋದಕರು: Mahantesh Kumbar Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080