ಅಭಿಪ್ರಾಯ / ಸಲಹೆಗಳು

ಕಿರು ವಾಯುಶಕ್ತಿ ಮತ್ತು ಜಲಶಕ್ತಿ

ಉದ್ದೇಶ:

 • ಕಿರು ವಾಯುಶಕ್ತಿ ಮತ್ತು ಜಲಶಕ್ತಿಗೆ ಸಂಬಂಧಿಸಿದಂತೆ ತಂತ್ರಜ್ಞಾನ ತರಬೇತಿ ನೀಡುವುದು.

 • ವಿವಿಧ ಸ್ಥಳಗಳಲ್ಲಿ ಶಕ್ತಿ ತಯಾರಿಕೆಗೆ ಇರುವ ಸಾಧ್ಯತೆಯನ್ನು ಮೌಲ್ಯಮಾಪನ ಮಾಡುವುದು.

 • ವಿವಿಧ ಸ್ಥಳಗಳಲ್ಲಿ ಕಿರು ವಾಯು, ಜಲಶಕ್ತಿ ಘಟಕಗಳ ಮಾದರಿಗಳನ್ನು ಜನಪ್ರೀಯಗೊಳಿಸುವುದು.

 

ಸಲಹಾ ಸೇವೆಗಳು :

 • ಕಿರು ವಾಯು ಶಕ್ತಿ ಸಾಮರ್ಥ್ಯದ ಬಗ್ಗೆ ಸ್ಥಳ ಮೌಲ್ಯಮಾಪನ

 • ಕಿರು ಜಲ ಶಕ್ತಿ ಸಾಮರ್ಥ್ಯದ ಬಗ್ಗೆ ಸ್ಥಳ ಮೌಲ್ಯಮಾಪನ

 • ಸೋಲಾರ್-ವಾಯುಶಕ್ತಿ / ಸೋಲಾರ್‌ – ಕಿರು ಜಲಶಕ್ತಿ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯುದ್ದೀಕರಣ.

 

ಗಾಳಿ ಶಕ್ತಿಯ ಬಗ್ಗೆ ಪರಿಚಯ :

ಗಾಳಿ ಮತ್ತು ಅದರ ಚಲನೆ ಭೂಮಿಯ ಮೇಲ್ಮೈನ ಹಿಗ್ಗು ತಗ್ಗು ಹಾಗೂ ಉಷ್ಣಾಂಶದ ವ್ಯತ್ಯಾಸದಿಂದ ಉಂಟಾಗುತ್ತದೆ. ಚಲಿಸುವ ಗಾಳಿಯನ್ನು ಬಳಸಿಕೊಂಡು, ಯಂತ್ರಗಳ ಸಹಾಯದಿಂದ ವಿದ್ಯುತ್ಅನ್ನು ತಯಾರಿಸಲಾಗುತ್ತದೆ.

ಗಾಳಿಶಕ್ತಿ

ಗಾಳಿಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು, ಗಾಳಿಯ ಹರಿವಿನಿಂದ ಟರ್ಬೈನ್ಗಳನ್ನು ತಿರುಗಿಸುವುದರ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ.ಇದು ನವೀಕರಿಸಬೇಕಾದ ಶಕ್ತಿಯ ಸಂಪನ್ಮೂಲವಾಗಿದೆ ಮತ್ತು ಇತರ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲ್ ಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.ಹಿಂದಿನ ಕಾಲದಲ್ಲಿ ಗಾಳಿಶಕ್ತಿಯನ್ನು ಧಾನ್ಯಗಳನ್ನು ಹಿಟ್ಟುಮಾಡುವ ಗಿರಿಣಿಗಳಿಗೆ ಮತ್ತು ನೀರನ್ನು ಪಂಪಮಾಡುಲು ಮತ್ತು ಹಡುಗುಗಳನ್ನು ಮುಂದೂಡಲು ಬಳಸುತ್ತಿದ್ದರು.ಆಧುನಿಕ ಗಾಳಿಯಂತ್ರಗಳು ಬಹುತೇಕ ಒಳಚರಂಡಿ,ಭೂಮಿಯಂದ ಅಂತರ್ಜಲ ತೆಗೆಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ.

 

ವಿಂಡ್ ಮಿಲ್

ಗಾಳಿಗಿರಿಣಿಗಳು ಬ್ಲೇಡ್ ಗಳ ಎರಡು ಅಲಗುಗಳ ಮೂಲಕ ಗಾಳಿಶಕ್ತಿಯನ್ನು ಪರಿಭ್ರಮಣದ ಶಕ್ತಿಯಾಗಿ ಪರಿವರ್ತಿಸುವ ಒಂದು ಗಿರಿಣಿ.

 

ಭಾರತದಲ್ಲಿ ಪವನ ವಿದ್ಯುತ್ ಶಕ್ತಿ

 

ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು.ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣವೂ ಏರಿಕೆ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ US ಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ.

ಇತ್ತೀಚಿನ ಅಂದರೆ 31 ಅಕ್ಟೋಬರ್ 2019 ರವರೆಗೆ ಒಟ್ಟು ಸ್ಥಾಪಿತ ಭಾರತದಲ್ಲಿನ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವೆಂದರೆ 37,090MW, ಆಗಿದೆ. ಪ್ರಮುಖವಾಗಿ ಇದರ ಉತ್ಪಾದನಾ ಚಟುವಟಿಕೆಯು ಎಲ್ಲೆಡೆಗೂ ತಮಿಳುನಾಡು (8197MW),ಮಹಾರಾಷ್ಟ್ರಾ (4784MW), ಗುಜರಾತ (5613MW), ಕರ್ನಾಟಕ (4791.23MW), ರಾಜಸ್ಥಾನ (4297MW), ಮಧ್ಯಪ್ರದೇಶ (2520MW), ಆಂಧ್ರ ಪ್ರದೇಶ (3963MW), ಕೇರಳ (53MW).ಈ ಪವನಶಕ್ತಿ ವಿದ್ಯುತ್ ಒಟ್ಟು 10% ರಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದೆ.ಭಾರತದ ವಿದ್ಯುತ್ ಶಕ್ತಿಗೆ 4% ರಷ್ಟು ತನ್ನ ಕೊಡುಗೆ ನೀಡುತ್ತದೆ.

ಒಂದೇ ನಿರ್ಧಿಷ್ಠ ಸ್ಥಳದಲ್ಲಿ ಒಂದು ಗುಂಪಿನ ಗಾಳಿ ಯಂತ್ರಗಳನ್ನು ನಿರ್ಮಿಸಿ ವಿದ್ಯುತ್ತಯಾರಿಕೆಗೆ ವಿಂಡ್ಫಾರ್ಮ್ಎಂದು ಕರೆಯುತ್ತಾರೆ. ಈಗ ಒಂದು ಸ್ಥಳದಲ್ಲಿ ನಿರ್ಮಿಸಲ್ಪಟ್ಟ ಗಾಳಿಯಂತ್ರಗಳ ನಡುವಿನ ಸ್ಥಳವನ್ನು ಕೃಷಿ ಅಥವಾ ಬೇರೆ ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ವಿಂಡ್ಫಾರ್ಮ್ಗಳಲ್ಲಿ, ಒಂದೊಂದು ಗಾಳಿ ಯಂತ್ರಗಳಿಂದ ಬರುವ ವೋಲ್ಟೇಜ್ಅನ್ನು ಒಂದೆಡೆ ಪವರ್ಕಲೆಕ್ಷನ್ಸಿಸ್ಟಂ ಮತ್ತು ಕಮ್ಯುನಿಕೇಶನ್ಸಿಸ್ಟಂ ಮೂಲಕ ಪಡೆಯುತ್ತಾರೆ. ಒಂದೊಂದು ಗಾಳಿಯಂತ್ರಗಳಿಗೂ ನಿರ್ದಿಷ್ಠ 7D [ರೋಟಾರ್ ವ್ಯಾಸಕ್ಕಿಂತ 7 ಭಾರಿ] ಹೆಚ್ಚಿನ ದೂರ ಇರುತ್ತದೆ. ವಿದ್ಯುತ್ಉಪನಿಲ್ದಾಣದಲ್ಲಿ (Sub station) ವಿಂಡ್ಫಾರ್ಮ್ನಿಂದ ಬಂದ ವೋಲ್ಟೇಜ್ಅನ್ನು ಹೆಚ್ಚಿಸಿ ಪ್ರಸರಣಾ ನಿಗಮಕ್ಕೆ ಕಳಿಸುತ್ತಾರೆ.

ಭಾರತದಲ್ಲಿ ಗಾಳಿ ವಿದ್ಯುತ್ಶಕ್ತಿ:

ಅಂದಾಜು ಸಾಮರ್ಥ್ಯ – 15,000 ಮೆಗಾವ್ಯಾಟ್

ದಿನಾಂಕದಂತೆ ನಿಯೋಜಿಸಲಾಗಿದೆ – 2013.17 ಮೆಗಾವ್ಯಾಟ್

ಗಾಳಿಯಂತ್ರಗಳಿಂದ ತಯಾರಾದ ವಿದ್ಯುತ್ ಪ್ರತಿ ಯೂನಿಟ್ದರ ಭಾರಿ ಇಳಕೆ ಕಂಡಿದ್ದು, 2017 ಡಿಸೆಂಬರ್ಹೊತ್ತಿಗೆ ರೂ.2.43 ಪ್ರತಿ ಯೂನಿಟ್ವಿದ್ಯುತ್ದರವಾಗಿದೆ.

ಗಾಳಿಯಂತ್ರಗಳ ವಿಧಗಳು:

ಗಾಳಿ ಯಂತ್ರಗಳನ್ನು 2 ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಅಡ್ಡವಾಗಿ ತಿರುಗುವ ಗಾಳಿಯಂತ್ರಗಳನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿದೆ ಮತ್ತು ಲಂಬವಾಗಿ ತಿರುಗುವ ಗಾಳಿಯಂತ್ರಗಳನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ.

)        ಲಂಬವಾಗಿ ತಿರುಗುವ ಗಾಳಿಯಂತ್ರಗಳು:

ಅಡ್ಡಲಾಗಿ ತಿರುಗುವ ಗಾಳಿ ಯಂತ್ರಗಳಿಗಿಂತ, ಲಂಬವಾಗಿ ತಿರುಗುವ ಗಾಳಿಯಂತ್ರಗಳು ಇತ್ತೀಚಿನ ದಿನಗಳಲ್ಲಿ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸುಲಭವಾಗಿವೆ. ಆದರೆ ಅಡ್ಡಲಾಗಿ ತಿರುಗುವ ಗಾಳಿಯಂತ್ರಗಳಿಗೆ ಹೋಲಿಸಿದ್ದಲ್ಲಿ ವಿದ್ಯುತ್ಜಾಲಕ್ಕೆ ಇವುಗಳಿಂದ ತಯಾರಾದ ವಿದ್ಯುತ್ಅನ್ನು ತಲುಪಿಸಲು ಸ್ಥಿರತೆಯ ಕೊರತೆ ಇರುವುದು ಕಂಡುಬಂದಿದೆ.

ಲಂಬವಾಗಿ ತಿರುಗುವ ಗಾಳಿಯಂತ್ರಗಳು ಕೆಳಗಿನ ಅನುಕೂಲತೆಗಳನ್ನು ಹೊಂದಿದೆ:

 • ಲಂಬಾ ರೇಖೆಯಲ್ಲಿ ಗಾಳಿಯಂತ್ರಗಳು ಇರುವುದರಿಂದ ಯಾವಾಗಲೂ ಚಲಿಸುವ ಗಾಳಿಯ ದಿಕ್ಕಿಗೇ ಇರುತ್ತದೆ.

 • ಗಾಳಿಯಂತ್ರಗಳ ಮೇಲ್ಮೈ ವಿಸ್ತೀರ್ಣ ದೊಡ್ಡದಾಗಿರುವುದರಿಂದ, ವಿದ್ಯುತ್ತಯಾರಿಕೆ ಹೆಚ್ಚಾಗಿರುತ್ತದೆ.

 • ರಭಸವಾಗಿ ಬೀಸುವ ಗಾಳಿಯಲ್ಲೂ ಕೂಡ ಹೆಚ್ಚು ವಿದ್ಯುತ್ತಯಾರಿಕೆ ಸಾಧ್ಯತೆ ಇದೆ.

 • ಮನೆ ಛಾವಣಿ, ಹೆದ್ದಾರಿ ಪಕ್ಕದಲ್ಲಿ, ಇತರ ಪ್ರದೇಶಗಳಲ್ಲಿಯೂ ಕೂಡ ನಿರ್ಮಿಸಬಹುದು.

 • ಗಾಳಿಯಂತ್ರಗಳ ಮೇಲ್ಮೈ ವಿಸ್ತೀರ್ಣ ಸ್ಪಷ್ಟವಾಗಿ ಕಾಣಿಸುವುದರಿಂದ ಯಾವುದೇ ಪಕ್ಷಿಗಳಿಗೆ ಪ್ರಾಣಹಾನಿ ಆಗುವುದಿಲ್ಲ.

 • ಮಿಲಿ ವ್ಯಾಟ್ನಿಂದ ಮೆಗಾವ್ಯಾಟ್ವಿದ್ಯುತ್ತಯಾರಿಕೆಗಳಿಗೂ ಇವುಗಳನ್ನು ಬಳಸಬಹುದು.

 • ಬಹಳ ಕಡಿಮೆ ಖರ್ಚಿನಲ್ಲಿಯೂ ಕೂಡ ಇವುಗಳನ್ನು ನಿರ್ಮಿಸಿಕೊಳ್ಳಬಹುದು.

 • ಇವುಗಳ ನಿರ್ವಹಣೆಯೂ ಕೂಡ ಸುಲಭವಾಗಿರುತ್ತದೆ.

 • ಬಹಳ ನಿಧಾನವಾಗಿ ತಿರುಗುವುದರಿಂದ ಕಡಿಮೆ ಶಬ್ಧ ಮಾಡುತ್ತವೆ.

 • ನೋಡಲು ಕೂಡ ಸುಂದರ ಮತ್ತು ಕಲಾತ್ಮಕವಾಗಿ ಕಾಣುತ್ತವೆ.

 

)        ಅಡ್ಡವಾಗಿ ತಿರುಗುವ ಗಾಳಿಯಂತ್ರಗಳು:

ಅಡ್ಡವಾಗಿ ತಿರುಗುವ ಗಾಳಿಯಂತ್ರಗಳು ಲಂಭವಾಗಿ ನಿಲ್ಲಿಸುವ ಟವರ್ಗಳ ಮೇಲ್ಭಾಗದಲ್ಲಿ ವಿದ್ಯುತ್ತಯಾರಿಸುವ ಜನರೇಟರ್ಮತ್ತು ರೋಟರ್ಬ್ಲೇಡ್ಗಳನ್ನು ಹೊಂದಿರುತ್ತವೆ. ರೋಟರ್ಬ್ಲೇಡ್ಗಳು ಗಾಳಿ ಬೀಸುವ ದಿಕ್ಕಿಗೆ ಅಥವಾ ಬೇರೆ ದಿಕ್ಕಿಗೂ ಕೂಡ ಮುಖ ಮಾಡಿರುತ್ತವೆ. ಚಿಕ್ಕ ಗಾಳಿಯಂತ್ರಗಳಿಗೆ ವಿಂಡ್ವೇನ್‌ (ಗಾಳಿ ದಿಕ್ಸೂಚಿ) ಮತ್ತು ದೊಡ್ಡ ಗಾಳಿಯಂತ್ರಗಳಿಗೆ ಸೆನ್ಸಾರ್‌ (ಸಂವೇದಕ)ಗಳನ್ನು ಮೋಟರ್ನೊಂದಿಗೆ ಅಳವಡಿಸಿರುತ್ತಾರೆ. ಸಾಮಾನ್ಯವಾಗಿ ಗಾಳಿಯಂತ್ರಗಳಿಗೆ ಗಿಯರ್ಸಿಸ್ಟಂ (ಗಿಯರ್ಗಳ ವ್ಯವಸ್ಥೆ) ಅಳವಡಿಸಿರುತ್ತಾರೆ, ಆದ್ದರಿಂದ ನಿಧಾನವಾಗಿ ಸುತ್ತುವ ಬ್ಲೇಡ್ಗಳ ವೇಗವನ್ನು ಹೆಚ್ಚಿಸಿ, ಜನರೇಟರ್ಗಳ ಮುಖಾಂತರ ವಿದ್ಯುತ್ಅನ್ನು ತಯಾರಿಸಲಾಗುತ್ತದೆ.

ಅಡ್ಡಲಾಗಿ ತಿರುಗುವ ಗಾಳಿಯಂತ್ರಗಳ ಪ್ರಯೋಜನಗಳು:

 • ಬದಲಾಯಿಸಬಹುದಾದ ಬ್ಲೇಡ್ಗಳ ಪಿಚ್ನಿಂದಾಗಿ, ಬೀಸುವ ಗಾಳಿಯ ದಿಕ್ಕಿಗೆ ಅನುಗುಣವಾಗಿ ಬ್ಲೇಡ್ಗಳ ಕೋನವನ್ನು ಮಾರ್ಪಾಡಿಸಬಹುದಾದ ತಂತ್ರಜ್ಞಾನವಿರುವುದರಿಂದ ಹೆಚ್ಚು ಗಾಳಿ ಬೀಸುವ ದಿಕ್ಕಿನೆಡೆಯಿಂದ ಹೆಚ್ಚು ಸಮಯ ವಿದ್ಯುತ್ಅನ್ನು ತಯಾರಿಸಲು ಸಹಾಯವಾಗುವಂತೆ ಮಾಡಬಹುದು.

 • ಲಂಭವಾಗಿ ನಿಲ್ಲಿಸಲಾದ ಶಿಖರಗಳ ಸಹಾಯದಿಂದ ಹೆಚ್ಚು ಗಾಳಿ ಬೀಸುವ ಎತ್ತರಕ್ಕೆ ಗಾಳಿಯಂತ್ರಗಳನ್ನು ಅಳವಡಿಸಿ ಅಂದರೆ ಪ್ರತಿ 10 ಮೀ ಎತ್ತರಕ್ಕೆ ಶೇ.20 ರಷ್ಟು ಗಾಳಿಯ ವೇಗವನಗನು ನಿರೀಕ್ಷಿಸಬಹುದು ಮತ್ತು ವಿದ್ಯುತ್ತಯಾರಿಕೆಯನ್ನೂ ಕೂಡ ಶೇ.34 ರವರೆಗೂ ಹೆಚ್ಚಿಗೆ ಪಡೆಯಬಹುದು.

 • ರೀತಿಯ ಗಾಳಿಯಂತ್ರಗಳ ಬ್ಲೇಡ್ಗಳು ಬೀಸುವ ಗಾಳಿಗೆ ವಿರುದ್ದ ದಿಕ್ಕಿಗೆ ಇರುವುದರಿಂದ ಹೆಚ್ಚು ವಿದ್ಯುತ್ದಕ್ಷತೆ ಇರುತ್ತವೆ.

 

ಕಿರು ವಿದ್ಯುತ್ಶಕ್ತಿ ಗಾಳಿ ಯಂತ್ರಗಳು:

ಕೆಲವು ಮಿಲಿ ವ್ಯಾಟ್ಗಳಿಂದ – 50 ಕಿ.ವ್ಯಾ ನಷ್ಟು ಶಕ್ತಿಯನ್ನು ಉತ್ಪಾದಿಸಲು ಅಳವಡಿಸಲಾಗುವ ಗಾಳಿಯಂತ್ರಗಳನ್ನು ಕಿರು ಪವನ ಶಕ್ತಿ ಯಂತ್ರಗಳು ಮತ್ತು ಇವುಗಳನ್ನು ಮನೆಗಳಿಗೆ, ಶಾಲಾ ಕಟ್ಟಡಗಳಿಗೆ, ದೂರವರ್ತಿ ಗ್ರಾಮಗಳಿಗೆ, ಸಾಮಾನ್ಯವಾಗಿ ಅಳವಡಿಸಿಕೊಂಡು ವಿದ್ಯುತ್ಅನ್ನು ತಯಾರಿಸಕೊಂಡು ಬಳಸಿಕೊಳ್ಳಬಹುದು. ಯಾರೊಬ್ಬರೂ ಕೂಡ ರೀತಿಯ  ಚಿಕ್ಕದಾದ ಗಾಳಿಯಂತ್ರಗಳನ್ನು ಅಳವಡಿಸಿಕೊಳ್ಳಬಹುದಾಗಿದೆ ಮತ್ತು ಇದರಿಂದ ಕಾರ್ಬನ್ಡೈ ಆಕ್ಸೈಡ್ಪ್ರಮಾಣವನ್ನು ಮತ್ತು ವಿದ್ಯುತ್ಶಕ್ತಿ ಬಿಲ್ಲಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ.

ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಭೂಮಿಯ ಮೇಲ್ಮೈನಿಂದ 30 ಮೀ ಎತ್ತರದಲ್ಲಿ ಕನಿಷ್ಠ 5 ಮೀ/ಸೆಕೆಂಡ್ನಷ್ಟು ಗಾಳಿಯ ವೇಗವನ್ನು ಪಡೆಯಲು ಸಾಧ್ಯವಿದ್ದರೆ ಅಂತಹ ಪ್ರದೇಶದಲ್ಲಿ ಗಾಳಿಯಂತ್ರಗಳನ್ನು ಅಳವಡಿಸಿಕೊಂಡು ವಿದ್ಯುತ್ಶಕ್ತಿಯನ್ನು ಉತ್ತಮವಾಗಿ ತಯಾರಿಸಿಕೊಳ್ಳಬಹುದಾಗಿದೆ.

ಪರಿಸರಕ್ಕೆ ಪ್ರಯೋಜನಗಳು:

ಪಳಯುಳಿಕೆ ಇಂಧನಗಳಿಗೆ ಹೋಲಿಸಿದ್ದಲ್ಲಿ, ಪರಿಸರಕ್ಕೆ ಗಾಳಿಯಂತ್ರಗಳಿಂದ ವಿದ್ಯುತ್ತಯಾರಿಸುವ ಪ್ರಕ್ರಿಯೆಯು ಬಹಳ ಸುಲಭ ಮತ್ತು ಪರಿಸರ ಸ್ನೇಹಿಯಾಗಿದೆ. ಅಂತರ್ದೇಶಗಳ ಸರ್ಕಾರದ ಹವಮಾನ ಬದಲಾವಣೆಗಳ ಒಕ್ಕೂಟಗಳ (IPCC) ಪ್ರಕಾರ, ಗಾಳಿಯಂತ್ರಗಳ ಜೀವಿತಾವಧಿಯ ಸಮಯದಲ್ಲಿ ಜಾಗತಿಕ ತಾಪಮಾನ ಹೇರಿಕೆಗೆ ಕೇವಲ 12-11 (g CO2 / kwhr) ನಷ್ಟು ಇದೆ ಎಂದು ತಿಳಿಸಲಾಗಿದೆ ಮತ್ತು ಯಾವುದೇ ಇತರ ಕಡಿಮೆ ಇಂಗಾಲದ ಆಮ್ಲ ಹೊಂದಿರುವ ಇಂಧನ ಮೂಲಗಳಲ್ಲಿ ಗಾಳಿಯಂತ್ರಗಳೂ ಕೂಡ ಇವೆ.

ಸ್ವದ್ಯೋಗ ಅವಕಾಶಗಳು:

ಖಾಸಗಿಯಾಗಿಯೂ ಕೂಡ ಗಾಳಿಯಂತ್ರಗಳನ್ನು ತಮ್ಮ ಜಮೀನಿನಲ್ಲಿ / ಬೇರೆಯವರ ಜಮೀನಿನಲ್ಲಿ / ಇತರ ಸ್ಥಳಗಳಲ್ಲಿ ಅಳವಡಿಸಿ, ವಿದ್ಯುತ್ತಯಾರಿಸಿ ಸಮೀಪದ ಗ್ರಿಡ್/ಜಾಲಕ್ಕೆ ಮಾರಾಟ ಮಾಡುವುದಲ್ಲದೆ, ಗಾಳಿಯಂತ್ರಗಳಿಂದ ವಿದ್ಯುತ್ತಯಾರಿಸಲು ಬೇಕಾಗಿರುವ ಉಪಕರಣಗಳು, ಕಚ್ಚಾ ವಸ್ತುಗಳನ್ನು, ವಿದ್ಯುತ್ಸರಬರಾಜು ಮಾಡುವ ಪ್ರಕ್ರೀಯೆ ಹಾಗೆ ಹಲವು ರೀತಿಯ ಸೌಕರ್ಯಗಳನ್ನು ಒದಗಿಸುವ ಸ್ವುದ್ಯೋಗವನ್ನು ಕೂಡ ನಡೆಸಬಹುದಾಗಿದೆ.

 

)        ವಿದ್ಯುತ್ಸ್ಥಾವರ ಅಭಿವೃದ್ಧಿದಾರರಿಗಾಗಿ:

 • ಉಪಕರಣ ತಯಾರಿಕೆ

 • ಕಚ್ಚಾ ವಸ್ತುಗಳ ತಯಾರಿಕೆ

 • ಘಟಕಗಳ ತಯಾರಿಕೆ

 • ವ್ಯವಹಾರ ಸಹಾಯ / ಅವಕಾಶ

 • ಮಾಹಿತಿ ತಂತ್ರಜ್ಞಾನ / ಸಲಹೆ / ಸಂಪನ್ಮೂಲ ಮೌಲ್ಯಮಾಪನ ಸೇವೆಗಳು

 • ಕಾರ್ಯಸಾಧ್ಯತೆ ಅಧ್ಯಯನ ಹಾಗೂ ಯೋಜನೆ ಅಭಿವೃದ್ಧಿ

 • ಜಿಯೊಟೆಕ್ನಿಕಲ್ಸೇವೆಗಳು

)        ಬೆಂಬಲ ಒದಗಿಸುವ ಸೇವೆಗಳು:

 • ಲಾಜಿಸ್ಟಿಕ್ಸೇವೆಗಳು

 • ಗಾಳಿಯಂತ್ರ ನಿರ್ಮಾಣದ ಅವಕಾಶಗಳು

 • ಕಾರ್ಯಾಚರಣೆ ಮತ್ತು ನಿರ್ವಹಣೆ

 • ವಿಮೆ ಯೋಜನೆಗಳು

 • ಹೈವೋಲ್ಟೇಜ್ಡೈರೆಕ್ಟ್ಕರೆಂಟ್ಪ್ರಸರಣಾ ವ್ಯವಸ್ಥೆ

ಹೀಗೆ ಹತ್ತು ಹಲವು ವಿಭಾಗಗಳಲ್ಲಿ ನೇರವಾಗಿ / ಪರೋಕ್ಷವಾಗಿ ಗಾಳಿಯಂತ್ರಗಳ ನಿರ್ಮಾಣಕ್ಕೆ ಬೇಕಾಗಿರುವ ಸೇವೆಗಳನ್ನು ಒದಗಿಸುವ ಸ್ವಉದ್ಯೋಗಗಳನ್ನು ನಿರ್ವಹಿಸಬಹುದಾಗಿದೆ.

ಸಾಮಾನ್ಯ ಅಂಶಗಳು:

 1. ಕಿರು ಗಾಳಿಯಂತ್ರಗಳು ತಿರುಗ®Ä ಕನಿಷ್ಠ 2 ಮೀ/ ಸೆ ನಷ್ಟು ಗಾಳಿಯ ವೇಗ ಅವಶ್ಯಕ

 2. ಕೆಲವು ಕಿರು ಗಾಳಿಯಂತ್ರಗಳು ಸರಾಸರಿ 3 ಮೀ/ಸೆ ಗಾಳಿಯ ವೇಗದಲ್ಲಿ ವಿದ್ಯುತ್ಅನ್ನು ತಯಾರಿಸುತ್ತವೆ.

 3. ಸರಾಸರಿ 6-15 ಮೀ/ಸೆ ಗಾಳಿಯ ವೇಗವಿದ್ದರೆ ಉತ್ತಮ ವಿದ್ಯುತ್ತಯಾರಿಕೆಗೆ ಅನುಕೂಲ.

 4. ಭಾರತವು ಗಾಳಿ ಯಂತ್ರಗಳ ಮೂಲಕ ವಿದ್ಯುತ್ತಯಾರಿಕೆಯಲ್ಲಿ ಚೀನಾ, ಅಮೇರಿಕ ಹಾಗೂ ಜರ್ಮನಿಯ ನಂತರದ ಸ್ಥಾನದಲ್ಲಿದೆ.

 5. ಭಾರತದಲ್ಲಿ 49,130 ಮೆ.ವ್ಯಾ ಅನ್ನು ಭೂಮಿಯ ಮೇಲ್ಮೈನಿಂದ 50 ಮೀ ಎತ್ತರದಲ್ಲಿ ಹಾಗೂ ಸರಾಸರಿ 1,02,788 ಮೆ.ವ್ಯಾ ಅನ್ನು 80 ಮೀ ಎತ್ತರದಲ್ಲಿ ಗಾಳಿಯಂತ್ರಗಳ ಮೂಲಕ ವಿದ್ಯುತ್ತಯಾರಿಸಲು ಸಾಧ್ಯವಿದೆ ಎಂದು ಅಂದಾಜಿಸಲಾಗಿದೆ.

 6. ಭೂಮಿಯ ಮೇಲ್ಮೈನಿಂದ 30 ಮೀ ಎತ್ತರದಲ್ಲಿ ಗಾಳಿಯ ವೇಗ 5-6 ಮೀ/ಸೆ ಇದ್ದರೆ ಸರಾಸರಿ 150-200 W/m2 ನಷ್ಟು ವಿದ್ಯುತ್ತಯಾರಿಕೆ ಸಾಧ್ಯವಿರುತ್ತದೆ.

 7. ಅತಿ ಹೆಚ್ಚು ಸಾಮರ್ಥ್ಯದ ಗಾಳಿಯಂತ್ರಭಾರತದಲ್ಲಿ 3000 ಕಿ.ವ್ಯಾ / 3 ಮೆ.ವ್ಯಾ, Acciona Wind Power Ltd., ಬೆಂಗಳೂರು.

 8. ಭಾರತದಲ್ಲಿ ಅತಿ ಹೆಚ್ಚು ಗಾಳಿಯಂತ್ರಗಳ ನಿರ್ಮಾಣ ಮಾಡಿರುವವರು – 9531 ಮೆ.ವ್ಯಾ, Suzlon Energy.

ಘಟಕದ ಅಂದಾಜು ವೆಚ್ಚ

500W Mini wind turbine only -Rs.25,000/-

1kW Mini wind turbine only- Rs.50,000/-

5kW Mini wind turbine only-2,50,000/-

 

ಉಪಯುಕ್ತ ಜಾಲತಾರಾಗಳು ಮತ್ತು ಮಾಹಿತಿಗಳು:

 • in/kredlinfo.in/projwind

 • res.in

 • gov.in/wind or mnre.gov.in/scheme/wind

 

ಕಿರು ಜಲಶಕ್ತಿ

ನವೀಕರಿಸಬಹುದಾದ ಇಂಧನವು ಹಸಿರು ಶಕ್ತಿ ಮತ್ತು ಪರಿಸರ ಸ್ನೇಹಿಯಾಗಿದ್ದು ಕಿರುಜಲ ಶಕ್ತಿಯೂ ಕೂಡ ಇದರಲ್ಲಿ ಒಂದಾಗಿದೆ.

ಕಿರು ಜಲ ವಿದ್ಯುತ್ ಯೋಜನೆಯು ಸಣ್ಣ ಸಮುದಾಯ ಅಥವಾ ಕೈಗಾರಿಕಾ ಘಟಕಗಳಿಗೆ ಸಣ್ಣ ಪ್ರಮಾಣದಲ್ಲಿ ಸೇವೆ ಮಾಡುವ ಜಲ ವಿದ್ಯುತ್ ಅಭಿವೃದ್ದಿ ಯೋಜನೆಯ ಒಂದು ಭಾಗವಾಗಿರುತ್ತದೆ. ಕಿರು ಜಲ ವಿದ್ಯುತ್ ಯೋಜನೆಯ ವ್ಯಾಖ್ಯಾನವು ಬದಲಾಗುತ್ತದೆ, ಆದರೆ, 25 ಮೆಗಾ ವ್ಯಾಟ್ ನಷ್ಟು ಸಾಮರ್ಥ್ಯವುಳ್ಳ ಯೋಜನೆಯನ್ನು ಕಿರು ಜಲ ವಿದ್ಯುತ್ ಯೋಜನೆಯೆಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಒಟ್ಟು 1,48,700 ಮೆಗಾ ವ್ಯಾಟ್‌ ನಷ್ಟು ಜಲಶಕ್ತಿಯಿಂದ ವಿದ್ಯುತ್‌ ಅನ್ನು ತಯಾರಿಸುವ ಅವಕಾಶವಿದ್ದು ಪ್ರಸ್ತುತ 45,400 ವೆಗಾ ವ್ಯಾಟ್‌ ನಷ್ಟು ವಿದ್ಯುತ್‌ ಉತ್ಪಾದನೆ ಆಗುತ್ತಿದ್ದು, ಅದರಲ್ಲಿ 4679 ಮೆಗಾ ವ್ಯಾಟ್‌ ನಷ್ಟು ವಿದ್ಯುತ್‌ ಕಿರುಜಲ ಶಕ್ತಿಯಿಂದ ಉತ್ಪಾದನೆ ಆಗುತ್ತಿದೆ.

25 ಮೆಗಾ ವ್ಯಾಟ್‌ ರವರೆಗೆ ಇರುವ ಜಲ ವಿದ್ಯುತ್‌ ಉತ್ಪಾದಕಾ ಘಟಕಗಳನ್ನು ಕಿರು ಜಲಶಕ್ತಿ ಘಟಕಗಳು ಎಂದು ಕರೆಯುತ್ತಾರೆ.

ಸಾರ್ವಜನಿಕ ವಲಯಗಳು ಶೇಕಡ 92.5 ರಷ್ಟು ಜಲ ವಿದ್ಯುತ್‌ ಉತ್ಪಾದಿಸುತ್ತಿದ್ದರೆ ಅವುಗಳಲ್ಲಿ ರಾಷ್ಟ್ರೀಯ ಜಲವಿದ್ಯುತ್‌ ನಿಗಮ (NHPC), ಈಶಾನ್ಯ ವಿದ್ಯುತ್‌ ಶಕ್ತಿ ನಿಗಮ ನಿಯಮಿತ (NEEPCO), ಸತ್ಲಜ್‌ ಜಲ ವಿದ್ಯುತ್‌ ನಿಗಮ ನಿಯಮಿತ (SJVN), ತೆಹ್ರಿ ಜಲ ಅಭಿವೃದ್ಧಿ ನಿಗಮ ನಿಯಮಿತ (THDC) ಮತ್ತು ರಾಷ್ಟ್ರೀಯ ಜಲ ವಿದ್ಯುತ್‌ ನಿಗಮ.

ಕಿರು ಜಲ ಶಕ್ತಿಯನ್ನು ಕೆಳಕಂಡಂತೆ ವಿಭಾಗಿಸಲಾಗಿದೆ:

ವಿಭಾಗ

ಸಾಮರ್ಥ್ಯ (ಕಿ.ವ್ಯಾ)

ಮೈಕ್ರೋ

100 ರವರೆಗೆ

ಮಿನಿ

101 ರಿಂದ 2000

ಸ್ಮಾಲ್‌

2001 ರಿಂದ 25000

 

ಭಾರತದಲ್ಲಿ ಒಟ್ಟು 20,000 ಮೆಗಾ ವ್ಯಾಟ್‌ ವಿದ್ಯುತ್‌ನ್ನು ಕಿರುಜಲ ಶಕ್ತಿಯಿಂದ ತಯಾರಿಸಲು ಅವಕಾಶವಿದೆ.

ಕರ್ನಾಟಕದಲ್ಲಿ ಕಿರುಜಲ ಶಕ್ತಿಯ ಒಟ್ಟು ಅವಕಾಶವಿರುವ ಸಾಮರ್ಥ್ಯ 3,500 ಮೆಗಾ ವ್ಯಾಟ್‌ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಪ್ರಸ್ತುತ 1256 ಮೆಗಾ ವ್ಯಾಟ್‌ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸಲಾಗುತ್ತಿದೆ.

ಮೈಕ್ರೋ ಕಿರುಜಲಶಕ್ತಿಯನ್ನು ಹರಿಯುವ ನೀರಿನ ಶಕ್ತಿಯಿಂದ ತಯಾರಿಸಲಾಗುತ್ತದೆ. ಎತ್ತರದಿಂದ  ಬೀಳುವ ನೀರಿನಲ್ಲಿರುವ ಶಕ್ತಿಯನ್ನು ಟರ್ಬೈನ್‌ಗಳ ಮೂಲಕ ವಿದ್ಯುತ್‌ನ್ನು ತಯಾರಿಸಲಾಗುತ್ತದೆ. ಈ ವಿದ್ಯುತ್‌ ತಯಾರಿಕೆಗೆ ಎರಡು ಪ್ರಮುಖ ಅಂಶಗಳು ಘಣನೆಗೆ ಬರುತ್ತದೆ ಅವುಗಳೆಂದರೆ a) ಹರಿವಿನ ಪರಿಮಾಣ b) ನೀರು ಬೀಳುವ ಎತ್ತರ (ಹೆಡ್).‌ ಈ ರೀತಿಯ ಚಿಕ್ಕ ಕಿರುಜಲ ಶಕ್ತಿ ಘಟಕಗಳನ್ನು ದೂರವರ್ತಿ ಮನೆಗಳಿಗೆ, ಕುಗ್ರಾಮಗಳಿಗೆ ಅಥವಾ ವಿದ್ಯುತ್‌ ಜಾಲಕ್ಕೆ ಸಂಪರ್ಕಿಸಬಹುದು.

ಉಚಿತವಾಗಿ ದೊರೆಯುವ ಜಲಶಕ್ತಿ ಮೂಲದಿಂದ ವಿದ್ಯುತ್‌ನ್ನು ತಯಾರಿಸಿ ಬಳಸುವುದರಿಂದ ಜಗತ್ತಿನ ಅಭಿವೃದ್ಧಿಗೊಳ್ಳುತ್ತಿರುವ ದೇಶಗಳಿಗೆ ಆರ್ಥಿಕವಾಗಿ ಅನುಕೂಲವಾಗಿದೆ. ಕೆಲವು ಪ್ರದೇಶಗಳಲ್ಲಿ ನೀರು ಹರಿಯುವ ಪ್ರದೇಶಗಳು ಅದರಲ್ಲೂ ಮುಖ್ಯವಾಗಿ ಮಳೆಗಾಲದಲ್ಲಿ ಸೌರಶಕ್ತಿಗೆ ಪೂರಕವಾಗಿ ಬಳಸಲು ಯೋಗ್ಯವಾಗಿದೆ. ಕಿರುಜಲ ಶಕ್ತಿ ವಿದ್ಯುತ್‌ ತಯಾರಿಕೆಯಲ್ಲಿ 2 ರೀತಿಯ ಟರ್ಬೈನ್‌ಗಳನ್ನು ಬಳಸಲಾಗುತ್ತದೆ.

ಬಹು ಎತ್ತರದಿಂದ ನೀರು ಬೀಳುವ ಮತ್ತು ಕಡಿಮೆ ನೀರಿನ ಪ್ರಮಾಣವಿರುವ ಸ್ಥಳಗಳಲ್ಲಿ Impulse Turbine ಅತಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸೂಕ್ತವಾಗಿದೆ.

ಕಡಿಮೆ ಎತ್ತರದ ಮತ್ತು ಹೆಚ್ಚು ನೀರಿನ ಪ್ರಮಾಣವಿರುವ ಸ್ಥಳಗಳಲ್ಲಿ Reaction Turbine ಗಳು ಅತಿ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಒಂದು ನಿರ್ದಿಷ್ಟ ನೀರಿನ ಪ್ರಮಾಣ ಮತ್ತು ನಿರ್ದಿಷ್ಟ ಎತ್ತರದಿಂದ ಬೀಳುವ ನೀರಿನ ಅಳತೆಯನ್ನು ಉಪಯೋಗಿಸಿಕೊಂಡು ವಿದ್ಯುತ್‌ ಶಕ್ತಿಯನ್ನು ತಯಾರಿಸುವ ಸಾಮರ್ಥ್ಯವನ್ನು ಕೆಳಗೆ ನೀಡಿದ ಸೂತ್ರದಿಂದ ತಿಳಿಯಬಹುದಾಗಿದೆ:

P             =             9.81 A X Q X h X n

P             =             Power in kW

Q             =             discharge in cum.m.per sec. (ನೀರಿನ ಪ್ರಮಾಣ)

H             =             Net head in meters (ನಿರ್ದಿಷ್ಟ ಎತ್ತರ)

N             =             Overall unit efficiency (0.85 to 0.9) (ದಕ್ಷತೆ)

ಕಿರು ಜಲ ಶಕ್ತಿ ಘಟಕಗಳ ಪ್ರಯೋಜನಗಳು:

 • 1) ಪರಿಸರ ಸ್ನೇಹಿಯಾಗಿರುವುದರಿಂದ ಪ್ರೋತ್ಸಾಹಿಸಲಾಗುತ್ತಿದೆ.

 • 2) ಸ್ಥಳೀಯವಾಗಿ ಇರಿಸಿಲಾಗುವುದರಿಂದ ಸ್ಥಳೀಯ ಜನರಿಗೆ ಉದ್ಯೋಗ ಲಭಿಸಲಿದೆ.

 • 3) ವಿಕೇಂದ್ರಿಕೃತ ವಿದ್ಯುತ್‌ ಶಕ್ತಿ ಘಟಕಗಳ ಸ್ಥಾಪನೆ.

 • 4) ಗ್ರಾಮೀಣ ಪ್ರದೇಶದಲ್ಲಿ ಅಳವಡಿಸುವುದರಿಂದ ವಿದ್ಯುತ್‌ ಅಭಾವ ನೀಗಿಸಬಹುದು.

 • 5) ಹಸಿರು ಶಕ್ತಿಯಾಗಿರುವುದರಿಂದ ಇಂಗಾಲದ ಆಮ್ಲದ ಪ್ರಮಾಣ ಕಡಿಮೆಯಾಗುವುದು.

 • 6) ಕಿರುಜಲ ವಿದ್ಯುತ್‌ ಬಳಕೆಯಿಂದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಪನ್ಮೂಲಗಳನ್ನು ಸಂರಕ್ಷಸಿಲಾಗಿದೆ.

 • 7) ದೊಡ್ಡ ಪ್ರಮಾಣದ ನೀರಿನ ಸಂಗ್ರಹಣೆಯಿಲ್ಲದಿರುವುದರಿಂದ ಪ್ರಕೃತಿ ಸಸ್ಯ ಮತ್ತು ಪ್ರಾಣಿಗಳಿಗೆ ತೊಂದರೆಯಾಗುವುದಿಲ್ಲ ಹಾಗೂ ಪುನರ್ವಸತಿ ಮತ್ತು ಸ್ಥಳಾಂತರವಿರುವುದಿಲ್ಲ.

 • 8)

ಘಟಕಗಳ ಸ್ಥಾಪನೆ ಮತ್ತು ವೆಚ್ಚ:

ಮೇಲೆ ತಿಳಿಸಿದಾಗೆ ಸ್ಥಳ ಪರೀವಿಕ್ಷಣೆ ನಡೆಸಿದ ನಂತರವಷ್ಟೇ ಎಷ್ಟು ಸಾಮರ್ಥ್ಯದ ಘಟಕವನ್ನು ಸ್ಥಾಪಿಸಬಹುದೆಂದು ತಿಳಿದುಬರುತ್ತದೆ. ನಂತರ ಅಗತ್ಯವಿರುವ ವಿದ್ಯುತ್‌ ಶಕ್ತಿಯನ್ನು ತಯಾರಿಸಲು ನೀಲಿ ನಕ್ಷೆಯನ್ನು ತಯಾರಿಸಬಹುದು. ಘಟಕದ ನಿರ್ಮಾಣಕ್ಕೆ ಬೇಕಾಗಿರುವ ವೆಚ್ಚ ತಿಳಿಸಿದ ಅಂಶಗಳ ಮೇಲೆ ಅವಲಂಭಿತವಾಗಿರುತ್ತದೆ.

 

 

ಅಂದರೆ:

 • ಸ್ಥಳದಲ್ಲಿರುವ ಶಕ್ತಿ ಸಾಮರ್ಥ್ಯ

 • ವಿದ್ಯುತ್‌ ಶಕ್ತಿಯ ಬೇಡಿಕೆ

 • ಭೂವೈಜ್ಞಾನಿಕ ಲಕ್ಷಣಗಳು

 • ಉಪಕರಣಗಳು (Turbine, Generator, Cable ಮತ್ತು ಇತರೆ)

 • ಸಿವಿಲ್‌ ಇಂಜಿನಿಯರಿಂಗ್‌ ಮತ್ತು ನಿರಂತರ ನೀರಿನ ಲಭ್ಯತೆ

ನಿರ್ವಹಣೆ, ಕಾರ್ಯಾಚರಣೆ, ದುರಸ್ತಿ, ವಿಮೆ ಈ ಎಲ್ಲಾ ಖರ್ಚ್ಚುಗಳು, ಘಟಕದ ಒಟ್ಟು ಅಳವಡಿಕೆ ವೆಚ್ಚದಲ್ಲಿ ಶೇ.1.5 – ಶೇ.5 ನಷ್ಟು ಇರುತ್ತದೆ.

ಅಲ್ಲದೇ ಸಣ್ಣದಾಗಿ ಹರಿಯುವ ನೀರಿನಿಂದಲೂ ಕೂಡ ಚಿಕ್ಕ ವಿದ್ಯುತ್‌ ತಯಾರಿಕಾ ಘಟಕಗಳನ್ನು ಕೂಡ ಅಳವಡಿಸಿಕೊಳ್ಳಬಹುದು.

ಉದಾಹರಣೆಗೆ : ಒಂದು ನಿರ್ದಿಷ್ಟ ಸ್ಥಳದಲ್ಲಿ ವರ್ಷಕ್ಕೆ ಕನಿಷ್ಠ 10 ತಿಂಗಳುಗಳಲ್ಲಿ ನೀರಿನ ಲಭ್ಯತೆ, 20 ಅಡಿಯಿಂದ ಹರಿಯುವ (ಅನುಕೂಲವಿರುವ) ನೀರಿನ ವ್ಯವಸ್ಥೆ ಮತ್ತು 2.4 ft3 / sec. ನಷ್ಟು ನೀರಿನ ಪ್ರಮಾಣವಿದ್ದರೆ ಕನಿಷ್ಠ 2 ಕಿ.ವ್ಯಾ ನಷ್ಟು ವಿದ್ಯುತ್‌ ಅನ್ನು ಪ್ರತಿ ಘಂಟೆಗೆ ತಯಾರಿಸಿಕೊಳ್ಳಬಹುದು. ಇದಕ್ಕೆ cross flow / propeller ಟರ್ಬೈನ್‌ಗಳು ಸೂಕ್ತವಾಗಿವೆ.

ವೆಚ್ಚ:

1 ಕಿ.ವ್ಯಾಗೆ        ಅಂದಾಜು         ರೂ.1 ಲಕ್ಷಗಳು

2 ಕಿ.ವ್ಯಾಗೆ        ಅಂದಾಜು         ರೂ.1.5 ಲಕ್ಷಗಳು

3 ಕಿ.ವ್ಯಾಗೆ        ಅಂದಾಜು         ರೂ.1.75 ಲಕ್ಷಗಳು

5 ಕಿ.ವ್ಯಾಗೆ        ಅಂದಾಜು         ರೂ.2.5 ಲಕ್ಷಗಳು

 

ಉಪಯುಕ್ತ ಜಾಲತಾರಾಗಳು ಮತ್ತು ಮಾಹಿತಿಗಳು:

http://kredlinfo.in/projhydro

https://mnre.gov.in/small-hydro-0

ಇತ್ತೀಚಿನ ನವೀಕರಣ​ : 10-08-2021 04:39 PM ಅನುಮೋದಕರು: Mahantesh Kumbar Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080