ಅಭಿಪ್ರಾಯ / ಸಲಹೆಗಳು

ಜೈವಿಕ ಇಂಧನ ಇಲಾಖೆ

ಜೈವಿಕ ಇಂಧನ ಇಲಾಖೆ

ಉದ್ದೇಶಗಳು :

 1. ಪರಿಸರ ಸ್ನೇಹಿ ಇಂಧನಗಳ ಬಳಕೆಗೆ ಉತ್ತೇಜನ ನೀಡುವುದು.

 2. ಖಾಲಿ ಜಾಗಗಳಲ್ಲಿ, ಬಂಜರು ಭೂಮಿಗಳಲ್ಲಿ ಹಾಗೂ ಹೊಲಗಳ ಬದುಗಳ ಮೇಲೆ ಜೈವಿಕ ಇಂಧನ ಸಸ್ಯಗಳನ್ನು ನೆಡಲು ಉತ್ತೇಜಿಸುವುದು.

 3. ಅಡುಗೆ ಮನೆ ತ್ಯಾಜ್ಯ ಆಧಾರಿತ ಜೈವಿಕ ಅನಿಲ ಘಟಕವನ್ನು ಉತ್ತೇಜಿಸುವುದು.

 

ಸಂಶೋಧನಾ ವಿಷಯಗಳು :

 • ಜೈವಿಕ ಡೀಸೇಲ್‌

 • ಜೈವಿಕ ಅನಿಲ

 • ಘನತ್ಯಾಜ್ಯ ನಿರ್ವಹಣೆ

 • ಸಾವಯವ ಕೃಷಿ

 

ಸಲಹೆ :

 • ಜೈವಿಕ ಇಂಧನ ಸಾಮರ್ಥ್ಯದ ಮೌಲ್ಯಮಾಪನ

 • ಜೈವಿಕ ಇಂಧನ ಸಸ್ಯಗಳ ಪೋಷಣೆ

 

ವಿಷಯ :

ಜೈವಿಕ ಇಂಧನ ಎಂಬುದು ಜೈವಿಕ ಮೂಲಗಳಿಂದ ಪಡೆದ ವಸ್ತುಗಳಿಂದ ಲಭ್ಯವಾಗುವ ನವೀಕರಿಸಬಹುದಾದ ಶಕ್ತಿಯಾಗಿದೆ. ಜೈವಿಕ ಇಂಧನವು ಜೈವಿಕ ತ್ಯಾಜ್ಯ, ಹುಲ್ಲು, ಗೊಬ್ಬರ ಮತ್ತು ವಿವಿಧ ಕೃಷಿ ತ್ಯಾಜ್ಯಗಳನ್ನು ಒಳಗೊಂಡಿದೆ. ಇವುಗಳನ್ನು ಬಯೋಮಾಸ್‌ಗಳೆಂದು ಕರೆಯಬಹುದಾಗಿದೆ. ಬಯೋಮಾಸ್‌ಗಳನ್ನು ಮಿಥೇನ್‌ ಅನಿಲ, ಎಥೆನಾಲ್‌ ಹಾಗೂ ಜೈವಿಕ ಡೀಸೇಲ್‌ನಂತಹ ಸಾರಿಗೆ ಇಂಧನಗಳನ್ನಾಗಿ ಪರಿವರ್ತಿಸಬಹುದಾಗಿದೆ. ಕೊಳೆತ ತ್ಯಾಜ್ಯ, ವ್ಯವಸಾಯ ತ್ಯಾಜ್ಯ ಮತ್ತು ಮಾನವ ತ್ಯಾಜ್ಯಗಳು ಬಿಡುಗಡೆ ಮಾಡುವ ಮಿಥೇನ್‌ ಅನಿಲವನ್ನು “ಜೈವಿಕ ಅನಿಲ” ಎನ್ನುತ್ತಾರೆ. ಸಿಹಿ ಜೋಳ, ಕಬ್ಬು ಮುಂತಾದ ಸಕ್ಕರೆ ಅಂಶ ಜಾಸ್ತಿ ಇರುವಂತಹ ವಸ್ತುಗಳನ್ನು ಉಪಯೋಗಿಸಿಕೊಂಡು ಹುದುಗಿಸುವಿಕೆಯ ಮೂಲಕ ಎಥೆನಾಲ್‌ ಉತ್ಪಾದನೆ ಮಾಡಬಹುದು. ಸಸ್ಯಜನ್ಯ ಮತ್ತು ಪ್ರಾಣಿಜನ್ಯ ತೈಲಗಳನ್ನು ಉಪಯೋಗಿಸಿಕೊಂಡು ಜೈವಿಕ ಡಿಸೇಲ್‌ ಅನ್ನು ಉತ್ಪಾದನೆ ಮಾಡಬಹುದಾಗಿದೆ.

 

ಜೈವಿಕ ಇಂಧನ ಮುಖ್ಯವಾಗಿ ಜೈವಿಕ ಮೂಲಗಳಿಂದ ಪಡೆದ ದ್ರವ ಅಥವಾ ಅನಿಲವಾಗಿದ್ದು, ಸಾರಿಗೆ ಮತ್ತು ಇತರೆ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ಜೈವಿಕ ಇಂಧನಗಳನ್ನು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಮತ್ತು ಪಳಯುಳಿಕೆ ಇಂಧನಗಳಿಗೆ ಪರ್ಯಾಯವನ್ನು ಒದಗಿಸುವ ಮೂಲಕ ಇಂಧನ ಭದ್ರತೆಯನ್ನು ಹೆಚ್ಚಿಸುವ ಪ್ರಮುಖ ವಿಧಾನವೆಂದು ಪರಿಗಣಿಸಲಾಗಿದೆ. ಜೈವಿಕ ಇಂಧನಗಳನ್ನು ಇಂಗಾಲದ ತಟಸ್ಥವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಸಸ್ಯಗಳು ಇಂಗಾಲದ ಡೈಆಕ್ಸೈಡ್‌ ಅನ್ನು ವಾತಾವರಣದಿಂದ ಹೀರಿಕೊಂಡು, ಸೂರ್ಯನ ಬೆಳಕನ್ನು ರಾಸಾಯನಿಕ ಶಕ್ತಿಯ ರೂಪದಲ್ಲಿ ಸಂಗ್ರಹಿಸುತ್ತವೆ. ಸಸ್ಯಗಳು ಶೇಖರಿಸಿದ ಕಾರ್ಬನ್‌ ಡೈಆಕ್ಸೈಡ್‌ ಜೈವಿಕ ಇಂಧನಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಇಂಧನಗಳನ್ನು ಸುಟ್ಟಾಗ ಪುನಃ ಡೈಆಕ್ಸೈಡ್‌ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತದೆ.

 

ಜೈವಿಕ ಇಂಧನಗಳನ್ನು ವಿವಿಧ ಪ್ರಕಾರಗಳಿಗೆ ವರ್ಗೀಕರಿಸಲಾಗಿದೆ:

ಮೊದಲ ತಲೆಮಾರಿನ ಜೈವಿಕ ಇಂಧನಗಳನ್ನು ಆಹಾರ ಬೆಳೆಗಳಿಂದ ನೇರವಾಗಿ ಉತ್ಪಾದಿಸಲಾಗುತ್ತದೆ ಬೆಳೆಗಳು ಒದಗಿಸುವ ಪಿಷ್ಟಸಕ್ಕರೆಪ್ರಾಣಿಗಳ ಕೊಬ್ಬು ಮತ್ತು ಸಸ್ಯಜನ್ಯ ಎಣ್ಣೆಯಿಂದ ಜೈವಿಕ ಇಂಧನವನು ಪಡೆಯಲಾಗುತ್ತದೆಜೈವಿಕ ಇಂಧನದ ರಚನೆಯು ತಲೆಮಾರುಗಳ ನಡುವೆ ಬದಲಾಗುವುದಿಲ್ಲಆದರೆ ಇಂಧನವನ್ನು ಪಡೆಯುವ ಕಚ್ಚಾ ವಸ್ತುಗಳು ಬದಲಾಗುತ್ತವೆ ಎಂಬುದನ್ನು ಗಮನಿಸುವುದು ಮುಖ್ಯಜೋಳಗೋಧಿ ಮತ್ತು ಕಬ್ಬು ಇವುಗಳು ಮೊದಲ ತಲೆಮಾರಿನ ಜೈವಿಕ ಇಂಧನದ ತಯಾರಿಕೆಯ ಕಚ್ಚಾ ವಸ್ತುಗಳಾಗಿವೆ.

 

ಎರಡನೇ ತಲೆಮಾರಿನ ಜೈವಿಕ ಇಂಧನಗಳನ್ನು  ಸುಧಾರಿತ ಜೈವಿಕ ಇಂಧನ ಎಂದು ಕರೆಯುತ್ತಾರೆಮೊದಲ ತಲೆಮಾರಿನ ಜೈವಿಕ ಇಂಧನಗಳಿಂದ ಇವುಗಳನ್ನು ಬೇರ್ಪಡಿಸುವ ಅಂಶವೆಂದರೆಎರಡನೇ ತಲೆಮಾರಿನ ಜೈವಿಕ ಇಂಧನಗಳನ್ನು ಉತ್ಪಾದಿಸಲು ಬಳಸುವ ಕಚ್ಚಾ ವಸ್ತುಗಳು ಸಾಮಾನ್ಯವಾಗಿ ಆಹಾರ ಬೆಳೆಗಳಲ್ಲಆಹಾರ ಬೆಳೆಗಳನ್ನು ಎರಡನೇ ತಲೆಮಾರಿನ ಜೈವಿಕ ಇಂಧನಗಳಿಗೆ ಬಳಸುವುದಾದರೆಅವುಗಳನ್ನು ಈಗಾಗಲೇ ಆಹಾರ ಉದ್ದೇಶಕ್ಕೆ ಬಳಸಿರಬೇಕುಉದಾಹರಣೆಗೆತ್ಯಾಜ್ಯ ಅಡುಗೆ ಎಣ್ಣೆ ಎರಡನೇ ತಲೆಮಾರಿನ ಜೈವಿಕ ಇಂಧನವಾಗಿದೆಏಕೆಂದರೆ ಇದನ್ನು ಈಗಾಗಲೇ ಬಳಸಲಾಗಿದ್ದು ಮತ್ತು ಇದನ್ನು ಮುಂದೆ ಮಾನವನ ಬಳಕೆಗೆ ಬಳಸಲು ಯೋಗ್ಯವಾಗಿರುವುದಿಲ್ಲ.

 

ಸಾಮಾನ್ಯ ಎರಡನೇ ತಲೆಮಾರಿನ ಪೂರಕ ವಸ್ತುಗಳು

 • ತೈಲ ಬೀಜದ ಬೆಳೆಗಳು : ಜೈವಿಕ ಡಿಸೇಲ್‌ ಉತ್ಪಾದನೆಯಲ್ಲಿ ಎಣ್ಣೆಬೀಜ ಬೆಳೆಗಳು ಉಪಯುಕ್ತವಾಗಿವೆ.

 • ತ್ಯಾಜ್ಯ ತರಕಾರಿ ಎಣ್ಣೆ (W V O) : ತ್ಯಾಜ್ಯ ತರಕಾರಿ ಎಣ್ಣೆಯನ್ನು ಒಂದು ಶತಮಾನಕ್ಕೂ ಹೆಚ್ಚು ಕಾಲ ಇಂಧನವಾಗಿ ಬಳಸಲಾಗುತ್ತದೆ. ಆರಂಭದಲ್ಲಿ ಕೆಲವು ಡಿಸೇಲ್‌ ಯಂತ್ರಗಳು ಸಸ್ಯಜನ್ಯ ತೈಲದ ಮೇಲೆ ಮಾತ್ರ ಚಲಿಸುತ್ತಿದ್ದವು.

 • ನಗರಗಳ ಘನತ್ಯಾಜ್ಯ : ಇದು ಭೂಭರ್ತಿ ಅನಿಲ (Landfill gas), ಮಾನವ ತ್ಯಾಜ್ಯ ಮತ್ತು ಹುಲ್ಲು ಇತರೆ ತ್ಯಾಜ್ಯಗಳನ್ನು ಒಳಗೊಂಡಿದೆ. ಈ ಎಲ್ಲಾ ಇಂಧನ ಮೂಲಗಳು ಅನೇಕ ಸಂದರ್ಭಗಳಲ್ಲಿ ಕೇವಲ ತ್ಯಾಜ್ಯಕ್ಕೆ ಹೋಗುತ್ತವೆ.

 

ತೃತೀಯ ತಲೆಮಾರಿನ ಜೈವಿಕ ಇಂಧನ ಎಂಬ ಪದವು ಇತ್ತೀಚೆಗೆ ಮುಖ್ಯವಾಹಿನಿಗೆ ಪ್ರವೇಶಿಸಿದ್ದು, ಅದು ಪಾಚಿಗಳಿಂದ ಪಡೆದ ಜೈವಿಕ ಇಂಧನವನ್ನು ಸೂಚಿಸುತ್ತದೆ. ಈ ಹಿಂದೆ, ಪಾಚಿಗಳನ್ನು ಎರಡನೇ ತಲೆಮಾರಿನ ಜೈವಿಕ ಇಂಧನಗಳೊಂದಿಗೆ ಒಟ್ಟುಗೂಡಿಸಲಾಗಿತ್ತು. ಪಾಚಿಗಳು ಇತರ ಕಚ್ಚಾ ವಸ್ತುಗಳಿಗಿಂತ ಕಡಿಮೆ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿಯನ್ನು ನೀಡುವುದರಿಂದ ಇವುಗಳನ್ನು ತೃತೀಯ ತಲೆಮಾರಿನ ಜೈವಿಕ ಇಂಧನ ವರ್ಗಕ್ಕೆ ಸೇರಿಸಲಾಗಿದೆ. ಪಾಚಿಗಳಿಂದ ಪಡೆಯಬಹುದಾದ ಇಂಧನಗಳು ಈ ಕೆಳಕಂಡಂತೆ ಇವೆ :

 • ಜೈವಿಕ ಡಿಸೇಲ್

 • ಬ್ಯುಟೆನಾಲ್

 • ಗ್ಯಾಸೋಲಿನ್

 • ಮೀಥೇನ್

 • ಎಥೆನಾಲ್

 • ಜೆಟ್‌ ಇಂಧನ

ರಾಷ್ಟ್ರೀಯ ಜೈವಿಕ ಇಂಧನ ನೀತಿ 2009 – ಪ್ರಮುಖ ವೈಶಿಷ್ಟ್ಯಗಳು

 • 2017ರ ವೇಳೆಗೆ 20% ಜೈವಿಕ ಡಿಸೇಲ್‌ ಮತ್ತು ಜೈವಿಕ ಎಥೆನಾಲ್‌ ಅನ್ನು ಪೆಟ್ರೋಲಿಯಂ ಇಂಧನಗಳ ಜೊತೆ ಮಿಶ್ರಣ ಮಾಡುವ ಸೂಚಕ ಗುರಿ.

 • ಜವಿಕ ಡಿಸೇಲ್‌ ಅನ್ನು ಅಖದ್ಯ ತೈಲದಿಂದ ತಯಾರಿಸಬೇಕು ಹಾಗೂ ಅಖಾದ್ಯ ತೈಲ ಬೆಳೆಗಳನ್ನು ಬರಡು ಭೂಮಿ, ಬಂಜರು ಭೂಮಿ ಹಾಗೂ ಹೊಲಗಳ ಬದುಗಳ ಮೇಲೆ ಬೆಳೆಯಲು ಪ್ರೋತ್ಸಾಹಿಸಬೇಕು.

 • ಜೈವಿಕ ಡಿಸೇಲ್‌ ಉತ್ಪಾದಿಸಲು ಬಳಸುವ ಅಖಾದ್ಯ ಎಣ್ಣೆಬೀಜಗಳನ್ನು ಉತ್ಪಾದಿಸುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ (MSP) ಘೋಷಿಸಬೇಕು.

 • ರಾಷ್ಟ್ರೀಯ ಜೈವಿಕ ಇಂಧನ ನಿಧಿ ಸೇರಿದಂತೆ ಹೊಸ ಮತ್ತು ಎರಡನೇ ತಲೆಮಾರಿನ ಜೈವಿಕ ಇಂಧನಗಳಿಗೆ ಆರ್ಥಿಕ ಪ್ರೋತ್ಸಾಹ.

 • ಜೈವಿಕ ಡಿಸೇಲ್‌ ಮತ್ತು ಜೈವಿಕ ಎಥೆನಾಲ್‌ ಅನ್ನು ರಾಜ್ಯಗಳ ಒಳಗೆ ಮತ್ತು ಹೊರಗೆ ಜೈವಿಕ ಇಂಧನಗಳ ಅನಿಯಂತ್ರಿತ ಚಲನೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು “ಘೋಷಿತ ಸರಕುಗಳ” ವ್ಯಾಪ್ತಿಗೆ ತರುವ ಸಾಧ್ಯತೆಯಿದೆ.

 • ವಿಶಾಲ ನೀತಿ ದೃಷ್ಟಿಕೋನಕ್ಕಾಗಿ ಪ್ರಧಾನ ಮಂತ್ರಿ ಅಡಿಯಲ್ಲಿ ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿಯನ್ನು ರಚಿಸುವುದು.

 • ನೀತಿ ಅನುಷ್ಠಾನದ ಮೇಲೆ ಮೇಲ್ವಿಚಾರಣೆಗೆ ಮಂತ್ರಿಮಂಡಳ ಕಾರ್ಯದರ್ಶಿ ಅಡಿಯಲ್ಲಿ ಜೈವಿಕ ಇಂಧನ ಚುಕ್ಕಾಣಿ ಸಮಿತಿಯನ್ನು ರಚಿಸುವುದು.

 • ಜೈವಿಕ ಇಂಧನ ಕ್ಷೇತ್ರದ ಪ್ರಚಾರ, ಅಭಿವೃದ್ಧಿ ಮತ್ತು ನೀತಿ ನಿರೂಪಣೆಯಲ್ಲಿ ಹಲವಾರು ಸಚಿವಾಲಯಗಳು ಪ್ರಸ್ತುತ ತೊಡಗಿಕೊಂಡಿವೆ.

 • ನವ್ಯ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಒಟ್ಟಾರೆ ನೀತಿ ನಿರೂಪಕರಾಗಿದ್ದು, ಜೈವಿಕ ಇಂಧನಗಳ ಅಭಿವೃದ್ಧಿ ಮತ್ತು ಅದರ ಉತ್ಪಾದನೆಗೆ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

 • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಜೈವಿಕ ಇಂಧನಗಳನ್ನು ಮಾರಾಟ ಮಾಡುವ ಮತ್ತು ಬೆಲೆ ಮತ್ತು ಖರೀತಿ ನೀತಿಯನ್ನು ಅಭಿವೃದ್ಧಿ ಪಡಿಸುವ ಮತ್ತು ಅನುಷ್ಠಾನಗಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

 • ಜೈವಿಕ ಇಂಧನ ಪೂರಕ ವಸ್ತುಗಳು ಬೆಳೆಗಳ ಉತ್ಪಾದನೆಗೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಕೃಷಿ ಸಚಿವಾಲಯದ ಪಾತ್ರ.

 • ಪಾಳುಭೂಮಿಗಳಲ್ಲಿ ಜಟ್ರೋಪಾ ತೋಟಗಳನ್ನು ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ.

 • ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜೈವಿಕ ಇಂಧನ ಬೆಳೆಗಳಲ್ಲಿನ ಸಂಶೋಧನೆಯನ್ನು ನಿರ್ದಿಷ್ಟವಾಗಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಬಲಿಸುವುದು.

 • ಜೈವಿಕ ಇಂಧನ ಅಭಿವೃದ್ಧಿ, ಪ್ರಚಾರ ಮತ್ತು ಬಳಕೆಯ ವಿವಿಧ ಅಂಶಗಳ ಕುರಿತು ಉನ್ನತ ಮಟ್ಟದ ಸಮನ್ವಯ ಮತ್ತು ನೀತಿ ಮಾರ್ಗದರ್ಶನ / ವಿಮರ್ಶೆಯನ್ನು ಒದಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಅನೇಕ ಇಲಾಖೆಗಳು ಮತ್ತು ಸಂಸ್ಥೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿಯನ್ನು (NBCC) ರಚಿಸಲಾಯಿತು.

 

ಜೈವಿಕ ಡಿಸೇಲ್‌ ಘಟಕ

ಸಂಸ್ಥೆಯು ಹೊಂಗೆ, ಜಟ್ರೋಪಾ ಮತ್ತು ಇತರ ಅಖಾದ್ಯ ತೈಲ ಮೂಲಗಳಿಂದ ಜೈವಿಕ ಡೀಸೆಲ್‌ ಉತ್ಪಾದಿಸುವ ಉದ್ದೇಶವನ್ನು ಹೊಂದಿದೆ. ಸಂಸ್ಥೆಗಳನ್ನುಶನ / ವಿಮರ್ಶೆಯನ್ನು ಒದಗಿಸುವ ದೃಷ್ ತ್ಯಾಜ್ಯ ಅಥವಾ ಸಸ್ಯಜನ್ಯ ಎಣ್ಣೆಗಳಿಂದ ಜೈವಿಕ ಡಿಸೇಲ್‌ನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಟ್ರಾನ್ಸ್ಎಸ್ಟರಿಫಿಕೇಷನ್‌ ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯನ್ನು ಯು.ಎಸ್.ನಲ್ಲಿ 1800ರ ದಶಕದ ಮಧ್ಯದಲ್ಲಿ ಗ್ಲಿಸರಿನ್‌ ಸಾಬೂನು ತಯಾರಿಸಲು ಬಳಸಲಾಯಿತು ಮತ್ತು ಉತ್ಪದಿಸಿದ ಎಸ್ಟರ್‌ಗಳನ್ನು (ಜೈವಿಕ ಡಿಸೇಲ್)‌ ಉಪಉತ್ಪನ್ನವೆಂದು ಪರಿಗಣಿಸಲಾಯಿತು. ಟ್ರಾನ್ಸ್ಎಸ್ಟರಿಫಿಕೇಷನ್ಲ್)‌ ಉಪಉತ್ಪನ್ನವೆಂದು ಪರಿಗಣಿಸಲಾಯಿತು. ದಶಕದ ಮಧ್ಯದಲ್ಲಿ ಗ್ಲಿಸರಿನ್‌ ಸಾಬೂನು ತಯಾರಿಸಲು ಬಳಸಲಾಯಿತು ಮತ್ತು ಉತ್ಪದಿಸಿದ ಎಸ್ಟರ್‌ಗಳನ್ನು (ಜೈವಿಕ ಡಿಸೆಗಳಿಂದ ಜೈವಿಕ ಡಿಸೇಲ್‌ನ್ನಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಟ್ರಾನ್ಸ್‌ಎಸ್ಟರಿ ಮೂಲತಃ ಸೋಡಿಯಂ ಹೈಡ್ರಾಕ್ಸೈಡ್‌ ಮತ್ತು ಆಲ್ಕೋಹಾಲ್‌ (ಮೆಥನಾಲ್)‌ ತೈಲಕ್ಕೆ ಬೆರೆಸಿ ಗ್ಲಿಸರಿನ್‌ ಅನ್ನು ತೆಗೆಯುವ ಪ್ರಕ್ರಿಯೆಯಾಗಿರುತ್ತದೆ. ಗ್ಲಿಸರಿನ್‌ನ ಸಾಂದ್ರತೆ ಕಡಿಮೆ ಇರುವುದರಿಂದ ತಳಭಾಗದಲ್ಲಿದ್ದು, ಜೈವಿಕ ಡಿಸೇಲ್‌ ಮೇಲ್ಭಾಗದಲ್ಲಿ ಬೇರ್ಪಡುತ್ತದೆ. ತೈಲದಿಂದ ಗ್ಲಿಸರಿನ್‌ ಅನ್ನು ತೆಗೆದುಹಾಕುವುದರಿಂದ ತೈಲವನ್ನು ತೆಳ್ಳಗೆ ಮಾಡುತ್ತದೆ, ಇದರಿಂದ ಡಿಸೇಲ್‌ ಯಂತ್ರಗಳಲ್ಲಿ ಬಳಸಬಹುದು.

 

ತೈಲ ಉತ್ಪಾದನೆಗೆ ಬಳಸುವ ಯಂತ್ರಗಳು :

ಮೆಕ್ಯಾನಿಕಲ್‌ (ಸ್ವಯಂ ಚಾಲಿತ) ಎಣ್ಣೆ ಅರೆಯುವ ಯಂತ್ರ : 24 ರಿಂದ 26.5%

ಗ್ರಾಮಗಳಲ್ಲಿ ಬಳಸುವ ಕ್ರಷರ್‌ಗಳು : 18 ರಿಂದ 22%

 

ಜೈವಿಕ ಅನಿಲ

ಜೈವಿಕ ಅನಿಲ ಘಟಕ (ಕೆ.ವಿ..ಸಿಮಾದರಿ : 2 ಘನ ಮೀಟರ್‌ ಗಾತ್ರದ ತೇಲುವ ಡ್ರಮ್‌ ವಿಧ) :

ಅಡುಗೆ ಅನಿಲವನ್ನು ಜೈವಿಕ ಅನಿಲ ಘಟಕದಿಂದ ಪಡೆಯಬಹುದು. ಅಡುಗೆ ಅನಿಲವನ್ನು (ಮೀಥೇನ್)‌ ಪಡೆಯಲು ನೀರಿನೊಂದಿಗೆ ಹಸುವಿನ ಸಗಣಿಯನ್ನು (50:50) ಮಿಶ್ರಣ ಮಾಡಿ ಜೈವಿಕ ಅನಿಲ ಘಟಕಕ್ಕೆ ತುಂಬಲಾಗುತ್ತದೆ. ಒಂದು ಘನ ಮೀಟರ್‌ ಜೈವಿಕ ಅನಿಲವನ್ನು 25 ಕೆ.ಜಿ. ಹಸುವಿನ ಸಗಣಿಯಿಂದ (2-3 ಹಸುಗಳು) ಪಡೆಯಬಹುದು, ಇದು 3-4 ಜನರಿರುವ ಕುಟುಂಬಕ್ಕೆ ಆಹಾರ ತಯಾರಿಸಲು ಸಾಕಾಗುತ್ತದೆ.

 

ಜೈವಿಕ ಅನಿಲ ಸ್ಥಾವರದ ಇತರೆ ಅನುಕೂಲಗಳು :

 • ಇದನ್ನು ಬೆಳಕು ಮತ್ತು ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತದೆ.

 • ಜೈವಿಕ ಅನಿಲದ ತ್ಯಾಜ್ಯವು ಉತ್ತಮ ಸಾವಯವ ಗೊಬ್ಬರವಾಗಿದೆ. 1 ಘನ ಮೀಟರ್‌ ಜೈವಿಕ ಅನಿಲ ಸ್ಥಾವರದಿಂದ ವಾರ್ಷಿಕವಾಗಿ 4 ಟನ್‌ ಸಾವಯವ ಗೊಬ್ಬರವನ್ನು ಪಡೆಯಬಹುದು.

 • ಅಡುಗೆ ಮನೆಯು ಹೊಗೆ ರಹಿತವಾಗಿರುತ್ತದೆ. ಮಹಿಳೆಯರ ಆರೋಗ್ಯವನ್ನು ರಕ್ಷಿಸುತ್ತದೆ.

 • ಉರುವಲು ಅಗತ್ಯವಿರುವುದಿಲ್ಲ. ಮರಗಳನ್ನು ಕಡಿಯುವುದು ತಪ್ಪಿಸಬಹುದು.

 • ಉತ್ತಮ ಪರ್ಯಾಯ ಇಂಧನ. ಪಳೆಯುಳಿಕೆ ಇಂಧನಗಳ ಸಂರಕ್ಷಣೆಯಾಗುತ್ತದೆ.

 

ಜೈವಿಕ ಅನಿಲ ಘಟಕ (ಧೀನಭಂದು ಮಾದರಿ : 1 ಘನ ಮೀಟರ್‌ ಗಾತ್ರದ ಸ್ಥರ ಡೂಮ್)‌ :

ಅಡುಗೆ ಅನಿಲವನ್ನು ಜೈವಿಕ ಅನಿಲ ಘಟಕದಿಂದ ಪಡೆಯಬಹುದು. ಅಡುಗೆ ಅನಿಲವನ್ನು (ಮೀಥೇನ್)‌ ಪಡೆಯಲು ನೀರಿನೊಂದಿಗೆ ಹಸುವಿನ ಸಗಣಿಯನ್ನು (50:50) ಮಿಶ್ರಣ ಮಾಡಿ ಜೈವಿಕ ಅನಿಲ ಘಟಕಕ್ಕೆ ತುಂಬಲಾಗುತ್ತದೆ. ಒಂದು ಘನ ಮೀಟರ್‌ ಜೈವಿಕ ಅನಿಲವನ್ನು 25 ಕೆ.ಜಿ. ಹಸುವಿನ ಸಗಣಿಯಿಂದ (2-3 ಹಸುಗಳು) ಪಡೆಯಬಹುದು, ಇದು 3-4 ಜನರಿರುವ ಕುಟುಂಬಕ್ಕೆ ಆಹಾರ ತಯಾರಿಸಲು ಸಾಕಾಗುತ್ತದೆ.

 

ಅಡುಗೆ ತ್ಯಾಜ್ಯದಿಂದ ಕಾರ್ಯನಿರ್ವಹಿಸುವ ಜೈವಿಕ ಅನಿಲ ಘಟಕ :

ಪೂಣೆಯ Appropriate Rural Technologies Institute (ARTI) ವತಿಯಿಂದ ನಾಲ್ಕು ಸದಸ್ಯರ ಕುಟುಂಬಕ್ಕಾಗಿ ಅಡುಗೆ ಮಾಡಲು ಮಾದರಿ ಜೈವಿಕ ಅನಿಲ ಘಟಕವನ್ನು ಸಿದ್ದಪಡಿಸಿದ್ದು, ಈ ಘಟಕಕ್ಕೆ ಪ್ರತಿದಿನ 1.5 ರಿಂದ 2 ಕೆ.ಜಿ. ಅಡುಗೆಮನೆ ತ್ಯಾಜ್ಯ 10-15 ಲೀಟರ್‌ ನೀರಿನೊಂದಿಗೆ ಮಿಶ್ರಣ ಮಾಡಿ ತುಂಬುವುದರಿಂದ ಮೀಥೇನ್‌ ಅನಿಲವನ್ನು ಉತ್ಪಾದಿಸಿ 2 ಗಂಟೆಗಳ ಕಾಲ ಒಲೆ ಉರಿಸಲು ಬಳಸಬಹುದಾಗಿದೆ.

 

ಎರೆಹುಳು ಗೊಬ್ಬರ

ಯುಡ್ರಿಲಸ್‌ ಯುಜೆನಿಯಾ (Eudrilus eugeniae)

ಎರೆಹುಳು ಗೊಬ್ಬರವು ಮಣ್ಣಿನಲ್ಲಿ ಸಿಗುವ ಎರೆಹುಳುಗಳನ್ನು ಬಳಸಿಕೊಂಡು ಮಿಶ್ರಗೊಬ್ಬರ ಮಾಡುವ ಸರಳ ಪ್ರಕ್ರಿಯೆಯಾಗಿದೆ (ಕೊಳೆತ ತರಕಾರಿ, ಉದ್ಯಾನದ ಹಸಿರು ತ್ಯಾಜ್ಯ, ಆಹಾರ ತ್ಯಾಜ್ಯಗಳ ವೈವಿಧ್ಯಮಯ ಮಿಶ್ರಣ).

 

ಸಂಸ್ಥೆಯಲ್ಲಿ ಕಲ್ಲಿನಿಂದ ನಿರ್ಮಿತವಾದ ತೊಟ್ಟಿಯಲ್ಲಿ ಉದ್ಯಾನವನದಲ್ಲಿರುವ ಕಳೆಗಳು ಹಾಗೂ ಉದುರಿದ ಎಲೆಗಳನ್ನು ಹಾಸಿಗೆಯ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಹುಳುಗಳ ಆರೋಗ್ಯದ ದೃಷ್ಟಿಯಿಂದ ಘಟಕದಲ್ಲಿ ತೇವಾಂಶ ಮತ್ತು ತಾಪಮಾನಗಳನ್ನು ಕಾಪಾಡಲಾಗುತ್ತದೆ. ಸರಿಯಾದ ಪರಿಸರವನ್ನು ಒದಗಿಸಿದ ನಂತರ ಯಾವುದೇ ತ್ಯಾಜ್ಯಗಳನ್ನು ತಿಂದು ಎರೆಹುಳುಗಳು ಹೊರಹಾಕುವ ಹಿಕ್ಕೆಗಳನ್ನು ಗೊಬ್ಬರವನ್ನಾಗಿ ಬಳಸಬಹುದಾಗಿದೆ. ಯಾವುದೇ ಕಾಂಪೋಸ್ಟಿಂಗ್‌ ಮಾದರಿಗಿಂತ ವೇಗವಾಗಿ ಎರೆಹುಳುಗಳು ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ.

 

ಇತ್ತೀಚಿನ ನವೀಕರಣ​ : 10-08-2021 03:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080